STORYMIRROR

Thimmanagouda Hanamagoudra

Abstract

1  

Thimmanagouda Hanamagoudra

Abstract

ಚಾಪಲ್ಯ

ಚಾಪಲ್ಯ

1 min
143

ಏನಿತು ಚಾಪಲ್ಯ ಈ ಜೀವಕೆ

ಪರರ ವಸ್ತು ಬೇಕೆಂದು ಹಠಮಾಡುವದು

ತನ್ನದಲ್ಲವೆಂಬ ಅರಿವಿದ್ದರು

ತನ್ನದಾಗ ಬೇಕೆಂಬ ಚಾಪಲ್ಯ


ಏನಿತು ಚಾಪಲ್ಯ ಈ ನಾಲಿಗೆಗೆ

ಕಂಡದನ್ನೆಲ್ಲ ತಿನ್ನ ಬೇಕೆಂಬ ಹಪಾಹಪಿ

ತನ್ನ ಚಾಪಲ್ಯದಿ, ಉದರಕೆ ವ್ಯಾಧಿ

ಆದರು ಚಿಂತೆಯಿಲ್ಲ ತಿನ್ನದೆ ಬಿಡುವುದಿಲ್ಲ


ಏನಿತು ಚಾಪಲ್ಯ ಈ ಮನಸಿಗೆ

ಶಿಂಧಿ ಸರಾಯಿ ಕುಡಿಯ ಬೇಕೆಂಬ ಹೊಲಸುತನ

ಮನ ಚಾಪಲ್ಯದಿ ವ್ಯಕ್ತಿ ಗೌರವಕೆ ದಕ್ಕೆ

ಮನದಿ ಹುಚ್ಚುತನದಿ ಸಂಸಾರದಿ ಒಡಕು


ಹುಚ್ಚು ಚಾಪಲ್ಯದಿ ಕೊಚ್ಚಿ ಹೋಗುತಿವೆ ಬದುಕುಗಳು

ಅತಿ ಚಾಪಲ್ಯ ಅನಾಹುತಕೆ ಕಾರಣ

ಲಗಾಮ ಇಲ್ಲದೆ ಬಿಟ್ಟರೆ ಚಪ್ಪಲಿ ಏಟು ನಿಶ್ಚಿತ.


Rate this content
Log in

Similar kannada poem from Abstract