ಬದಲಾವಣೆ
ಬದಲಾವಣೆ
ಬದಲಾವಣೆ ಜಗದ ನಿಯಮ
ಕಷ್ಟ ಸುಖಗಳ ಸಮಾಗಮ
ಹೊಂದಿಕೊಳ್ಳಲು ಸಿದ್ಧವಿರಬೇಕು ಮನ
ಸರಾಗವಾಗಿ ಸಾಗುವುದು ಜೀವನ
ಕಾಲ ಕಾಲಕ್ಕೆ ಪರಿವರ್ತನೆಯಾಗುವುದು ಪ್ರಕೃತಿ
ಇದರ ಬಗ್ಗೆ ಮನುಜನಿಗೆ ಇರಬೇಕು ಜಾಗೃತಿ
ಆಧುನಿಕ ಯುಗದಲ್ಲಿ ಹೆಚ್ಚಾಗುತಿದೆ ವಿಕೃತಿ
ಅಳಿದು ಹೋಗುತ್ತಿದೆ ನಮ್ಮ ಚಂದದ ಸಂಸ್ಕೃತಿ
ಪರಿಸ್ಥಿತಿಗೆ ತಕ್ಕಂತೆ ಅರಿತು ನಡೆವುದು ಅಗತ್ಯ
ಇದ್ದಂತೆ ಇರುವೆನು ಎಂಬುದು ಈಗ ಅಪಥ್ಯ
ಹೇಳುವರು ನೀವು ತುಂಬಾ ಬದಲಾಗಿದ್ದೀರಿ
ಗೊತ್ತಾಗಲೇ ಇಲ್ಲ ಕಾಲ ಪ್ರವಾಹದಲ್ಲಿ ಜಾರಿ
