💖@ಅಪ್ಪು_ಅಜರಾಮರವಾಗಲಿ🙏
💖@ಅಪ್ಪು_ಅಜರಾಮರವಾಗಲಿ🙏
ನಗೆಯೂರ ದೊರೆಯಿವನು
ನಗೆಗಡಲಲ್ಲೇ ತೇಲಿಸಿದವನು
ನಟನೆಯಲ್ಲಿ ಮನಸೆಳೆದವನು
ನಾಟ್ಯದಲ್ಲೆದುರಿಲ್ಲದವನು...!
ಗಾಜನೂರಿನ ಗಂದೆಡೆಯ ಗಂಡು
ಗಾಯನದಲೂ ಸಂತೃಪ್ತಿಯನುಂಡು
ಗಾರುಡಿಗನಂತೆ ಮನಮನವ ಕದ್ದು
ಗಮನಸೆಳೆದ ವಿನಯವನು ಹೊದ್ದು
ನಮ್ಮ ಮಾತಿನಲ್ಲಿ ಜ್ಞಾನವಿರಬೇಕು
ನಡತೆಯಲ್ಲಿ ವಿನಯವಿರಬೇಕು
ಎಲ್ಲರನ್ನು ಪ್ರೀತಿಸುವ ಗುಣವಿರಬೇಕು
ಬದುಕಿದರೆ ಅಪ್ಪುವಿನಂತೆ ಬದುಕಬೇಕು
ಜನುಮದಿನವಂತೆ ಅವನದು ಇಂದು
ಜನಮಾನಸದೆ ಅಚ್ಚಳಿಯದೆ ನಿಂದು
ಝಗಮಗಿಸುವ ಆರಾಧ್ಯರೆದೆಯಲಿ
ಜಗಮೆಚ್ಚಿದನಿವ ಅಜರಾಮರವಾಗಲಿ
