STORYMIRROR

Mudiyappa Hudeda

Inspirational

4  

Mudiyappa Hudeda

Inspirational

ಇವಳು........ ಲೋಕಜ್ಞಾನವಿಲ್ಲದವಳು.. ಅಮ್ಮ?...

ಇವಳು........ ಲೋಕಜ್ಞಾನವಿಲ್ಲದವಳು.. ಅಮ್ಮ?...

1 min
242

ಇವಳು........ 

ಲೋಕಜ್ಞಾನವಿಲ್ಲದವಳು.. ಅಮ್ಮ?... 


ಸಂಬಳವಿಲ್ಲದ ಅಡುಗೆ ಮನೆಯ ಆಳು

ಕುದಿಯುವ ನೀರು ಕುಕ್ಕರಿನ ಕೂಗಲಿ

ಪಾತ್ರೆಗಳ ಸದ್ದಿಗೆ ಉರಿಉರಿವ ಬೆಂಕಿಯಲಿ

ಉರಿದು ಹೋಯಿತು ಇವಳ…ನಗು? 


ಈರುಳ್ಳಿ ಒಗ್ಗರಣೆ ಘಾಟಿಗೆ ಕಣ್ಣೀರು

ಹುಳಿಯಾದ ಬದುಕು ಕಲ್ಲುಪ್ಪಿನಂತೆ ಕರಗಿದರು

ತೋರಲೇ ಇಲ್ಲ ಮನದಾಳದ ನೋವುಗಳ

ಈ ಅಮ್ಮ ಲೋಕಜ್ಞಾನವಿಲ್ಲದವಳು….. ?.


ಅಪ್ಪನ ಕೋಪ ತಾಪದ ನುಡಿಗಳು

ಹರಿತ ಚಾಕು ಮಕ್ಕಳ ಮಾತುಗಳು

ಕಾಳುಹುರಿದಂತೆ ಮಾತನಾಡುತ್ತಿದ್ದವಳು

ಮಾತನ್ನೆ ಮರೆತು ಮೂಕಿಯಾದಳು

ಈ ಅಮ್ಮ ಲೋಕಜ್ಞಾನವಿಲ್ಲದವಳು….. ?.


ಕಪಾಟಿನ ಸೀರೆಗಳಲಿ ಮಲಗಿದ ಮನದಾಸೆಗಳು

ಹಳೆಯ ಪಾತ್ರೆಗಳಲಿ ಅವಿತುಕೊಂಡ ಬಯಕೆಗಳು

ಪತಿ ಮಕ್ಕಳಿಗೆ ಬಿಸಿ ಬಿಸಿ ಭೋಜನ ಬಡಿಸಿ

ನಗುತಲಿ ತಾ ತಿಂದಳು ತಂಗಳು……ಮೌನವಾಗಿ

ಈ ಅಮ್ಮ ಲೋಕಜ್ಞಾನವಿಲ್ಲದವಳು….. ?.


ಮನೆಯ ಎಲ್ಲರ ಬೇಕುಬೇಡಗಳನ್ನು ಅರಿತವಳು

ಯಾರಿಗೇ ನೋವಾದರೂ ತಾನೂ ಕೊರಗುವವಳು

ಸಂಸಾರದ ಬೆನ್ನೆಲುಬಾಗಿ ಸುಖ ಬಯಸುವವಳು

ಕೊನೆಯಲ್ಲಿ ಯಾರಿಗೂ ಬೇಡವಾದಳು… ಇವಳು

ಈ ಅಮ್ಮ ಲೋಕಜ್ಞಾನವಿಲ್ಲದವಳು….. ?.


ಎರಡೊತ್ತಿನ ಕೂಳಿಗೆ ಇಂದಿಗೂ ಸದ್ದಿಲ್ಲದೆ 

ಗಾಣದ ಎತ್ತಿನಂತೆ ಮೌನವಾಗಿ, ಮೂದಲಿಕೆ 

ಚುಚ್ಚು ನುಡಿಗಳ ಉಡುಗೊರೆ ಪಡೆದು, ಭಾವನೆಗಳಿಲ್ಲದೆ

ದುಡಿವಾ ಜೀವಕೆ ನಿವೃತ್ತಿ ಉಂಟೆ,

 ಈ ಅಮ್ಮನ ಪದಕ್ಕೆ ನನ್ನೇರಡು ಸಾಲುಗಳು ಸಮರ್ಪಕ.... 


💖✍️M H HUDEDA


Rate this content
Log in

Similar kannada poem from Inspirational