#_ನಂದಿ"
#_ನಂದಿ"
ನಂದಿ ಇವನ ವಿಶ್ರಾಂತಿಯ ಸಮಯದಲಿ
ಹಸಿರು ಹುಲ್ಲು ಹಾಸಿನ ಮೇಲೆ ಬಾಯಲಿ
ಮೆಲಕು ಹಾಕುತ ಕುಳಿತಿಹ ತಲ್ಲೀನತೆಯಲಿ
ತನ್ನದೇ ಪ್ರಪಂಚದಲಿ ಧ್ಯಾನಸ್ಥ ಸ್ಥಿತಿಯಲಿ
ಬಿದಿಗೆ ಚಂದ್ರನಂತೆ ಇವನ ಜೋಡಿಕೋಡು
ಕೋಡಿನ ನಡುವೆ ಕಾಣುವ ನಂದಿಯ ನೋಡು
ಶಿವನ ವಿಗ್ರಹ ದೂರವಿದ್ದರೂ ಹಿಡದು ಜಾಡು
ಸಮೀಪವಿರುವ ಪಟ ತೆಗೆದ ಜಾಣ ನೋಡು
ನಂದಿಯ ಕೊರಳಲಿ ಹಿತ್ತಾಳೆಯ ಗಂಟೆಯದು
ಕೋಡನಲಿ ಕಟ್ಟಿರುವ ಹಗ್ಗದ ಸುರುಳಿಯದು
ಬಿಚ್ಚಿಬಿಟ್ಟ ಉದ್ದದ ಹಗ್ಗ ಕಾಲ ಬಳಿಯಿಹುದು.
ಒಡೆಯ ಬಿಟ್ಟಿಹ ಇಚ್ಛೆಯಂತೆ ಬಂಧಿಸದೆ ಅಹುದು
ರೈತಾಪಿ ಜನರ ಬದುಕಿನ ಹಾಸುಹೊಕ್ಕು ಇವ
ಜೀವನದ ಆನಂದ ಎಂದಿಗೂ ತರುವನಿವ
ದುಡಿವನು ಹೊಲ-ಗದ್ದೆಯಲಿ ಸೋಲರಿಯದವ
ಉತ್ತು- ಬಿತ್ತುವಾ ಕಾರ್ಯ ಮಾಡುವ ನಿಷ್ಠೆಯವ
ದೇಶದ ಬೆನ್ನೆಲುಬು ಕೃಷಿ ಅದಕೆ ಸಾಥಿ ನೀನೆ
ಮೇವು ಹಾಕಿ ನಿನ್ನ ಪ್ರೀತಿಯಲಿ ಮೈದಡವಿದನೆ
ಲಿಂಗದ ಮುಂದಿನ ಬಸವನಲ್ಲಿ ಕರ್ತವ್ಯ ನಿಷ್ಠನೆ
ಮಣ್ಣಿನ ಮಕ್ಕಳ ಬದುಕಿಗೆ ನೀ ಆಧಾರವಾದವನೆ
ಅತೀವೃಷ್ಟಿ- ಅನಾವೃಷ್ಟಿಗಳ ವಿಕೋಪವು
ಮಧ್ಯವರ್ತಿಗಳ ಶೋಷಣೆಯ ಕಾಟವು
ಸರ್ಕಾರದ ದಿವ್ಯ ನಿರ್ಲಕ್ಷ್ಯ ಧೋರಣೆಯ ಶಾಪವು
ಅವನ ಬಾಳಿನ ಜೊತೆಗೆ ನಿನ್ನದು ಸಹ ಅತಂತ್ರವು.
