ಆ ದಿನದ ಗಮ್ಮತ್ತು...
ಆ ದಿನದ ಗಮ್ಮತ್ತು...

1 min

11.6K
ಆ ದಿನದ ಗತ್ತು ಗಮ್ಮತ್ತೆ ಬೇರೆ !
ಅದೆಲ್ಲೋ ದೂರದಲ್ಲಿ ಸಮುದ್ರವೊಂದು
ಭೋರ್ಗರೆಯುತ್ತಿರುವ ಸದ್ದು ಕಿವಿಪಟಲಗಳಿಗೆ ಅಪ್ಪಳಿಸುತ್ತಿತ್ತು
ಅದು ಸೂರ್ಯ- ನಿರ್ಗಮನದ, ಚಂದ್ರನಾಗಮನದ ಹೊತ್ತು
ಮನೆಸೇರುವ ಹಕ್ಕಿಗಳ ಚಿಲಿಪಿಲಿ ಶುರುವಾಗಿ ಕೊನೆಗೊಂಡರೂ
ನಮ್ಮಲ್ಲೇಕೋ ಈ ಸಿಹಿ ಮೌನ
ನನ್ನವಳು ಅಪ್ಪುಗೆ ಸಡಿಲಿಸಿ, ಕಣ್ಣರಳಿಸಿದಳು
ಸಮಯದ ಜ್ಞಾತವಾಗಿ ನಸುನಕ್ಕಳು, ಮತ್ತೆ ಅಪ್ಪಿದಳು
ಅಂದು ತುಟಿಗಳು ಅರಳಿದವು, ಮಿಂದವು,
ನಲಿದವು, ಅಗಲಿದವು
ಮತ್ತೇ ಅದೇ ನೀರವ ಸಿಹಿಮೌನ
ಆಹಾ! ಆ ದಿನದ ಗತ್ತು ಗಮ್ಮತ್ತೆ ಬೇರೆ...