ಯಾವುದೀಕನಸು
ಯಾವುದೀಕನಸು
ಕನಸಿಲ್ಲದೆ ಏನೂ ನಡೆಯುವುದಿಲ್ಲ
ಕನಸೇ ಜೀವನದ ಮೊದಲ ಹೆಜ್ಜೆ
ಕನಸಿಲ್ಲದ ಜೀವಕ್ಕೆ ಎಲ್ಲಿದೆ ಸುಖ?
ಕನಸು ತುಂಬಿದ ಜೀವಕ್ಕೆ ಇಲ್ಲ ದುಃಖ!!
ಕನಸು ಯಾವುದೆಂದು ಹೇಳುವೆಯಾ
ಕತ್ತಲಾದ ನಿದ್ದೆ ತರಿಸುವ ಆ ಭ್ರಮೆಯೇ?
ನಾಳೆಯಾದರೂ ಸಿಗಬಹುದೇ ಉತ್ತರ
ದಯೆ ಕರುಣಿಸುವರೆಂದು ಕಾಯುವುದೆ?
ನಾಳೆ ನಾನು ಏನಾಗಬಲ್ಲೆ
ನಾಳೆ ಕಾರು ಬಂಗಲೆ ನನ್ನದಾಗಬಹುದೇ
ರಾತ್ರಿ ಮಲಗಿದರೆ ಸಿಹಿಯಾದ ನಿದ್ದೆಯೇ?
ಕೈಗೆ ಎಟುಕದ ಗಗನ ಕುಸುಮವೇ?
ಸಮಯಕ್ಕಾಗಿ ಕಾಯಲೇ ಬೇಕು
ಕಾಯದೇ ಬರುವುದು ಯಾವುದಿದೆ?
ಕಾತರತೆಯ ಸ್ವರ್ಗ ತಿಳಿದಿದೆಯೇ?
ಕನಸಿಗಾಗಿ ಕಾತರಿಸಬೇಕು, ನಿದ್ದೆಗೆಡಬೇಕು!!
ಕನಸು ಕಾಣುತ್ತಿದ್ದೇವೆ ನಾವು
ನನಸಾಗಿಸುವ ಪ್ರಮೇಯ ಯಾವುದು?
ಪ್ರಯತ್ನದ ದಾರಿ ಮರೆತುಹೋಗಿದೆ
ದಾರಿ ಕಾಣದಾಗಿ ಪರಿತಪಿಸುತ್ತಿದ್ದೇನೆ!!
ನಿತ್ಯವೂ ಬರುವ ಕನಸು ಯಾವುದು?
ಯಾರಾದರು ಹೇಳಬಲ್ಲಿರಾ ಯಾವ ಕನಸೆಂದು
ನಿದ್ದೆಗೆ ಜಾರದಂತೆ ಮಾಡುವುದೇ
ಇಲ್ಲ, ಕಾರ್ಯಪ್ರವೃತವಾಗಿಸುವ ಚೈತನ್ಯವೇ?