ಸಾಗು ಮುಂದೆ
ಸಾಗು ಮುಂದೆ
ಹರಿವ ನೀರು ಮರೆತು ನಿಂತರೆ
ಬೀಸೋ ಗಾಳಿ ಬಸವಳಿದು ಕುಂತರೆ
ಯೋಚಿಸುವ ಮನಕೆ ತೋಚದೇ ಹೋದರೆ
ಹೇಗೆ ಸಾಗುವುದು ಬದುಕು ?
ನೀರು ಝರಿಯಾಗಿ ಗಾಳಿ ಮಾರುತವಾಗಿ
ಮನವು ತರಂಗವಾಗಿ ಗುರಿಯ ಮುಟ್ಟಬೇಕು .
ನಿಲಬೇಡ ಎಂದೂ ಹೆದರಿಕೆಯು ಬಂದು
ಕಷ್ಟವೆಂಬುದು ಬರುವುದು ಮರೆಯದೆ ಇಂದೂ
ಯೋಚನೆ ಬೇಡ ಇದು ಮುಗಿಯುವುದು ಎಂದೋ ?
ನಂಬಿಕೆ ಇರಲಿ ನಿನ ಮೇಲೆ ಮುಂದೂ.