ರಂಗಿನ ಓಕುಳಿ
ರಂಗಿನ ಓಕುಳಿ
ಮೂಡಣದಲಿ ಕೆಂಪಾಗಿ ಉದಯಿಸಿದ ದಿವಾಕರನಿಗೆ
ಕೋಗಿಲೆಗಳ ಕುಹೂ ಕುಹೂ ಧ್ವನಿಯ ಜೋಗುಳ
ಪಕ್ಷಿಗಳ ಚಿಲಿ ಪಿಲಿ ಕಲರವದ ಇಂಪಿಗೆ
ನವಿಲುಗಳು ನರ್ತಿಸಿವೆ ಬಿಚ್ಚಿ ತಮ್ಮ ಗರಿಗಳ
ಬಾನಿನ ತುಂಬೆಲ್ಲಾ ಪಸರಿದೆ ಕೆಂಪು ರಂಗಿನ ಓಕುಳಿ
ಅದನು ಸವಿಯುವುದೇ ಮನಕೆ ಹಬ್ಬದ ಸಡಗರವು
ನಿಸರ್ಗವೇ ಕರೆದಂತಾಗಿದೆ ಬಾ ಬಾ ಎಂದು ತನ್ನ ಬಳಿ
ಪ್ರಕೃತಿಯ ಚೆಲುವಿನಲಿ ಮನವಾಗಿದೆ ಮೂಕ ವಿಸ್ಮಿತವು
ನೀರಿನಲೂ ಕಾಣುತಿದೆ ಬಾನಿನ ಕೆಂಪಾದ ಪ್ರತಿಬಿಂಬ
ನದಿ ನೀರು ಹರಿಯುತಿದೆ ಹೊತ್ತು ಚಿನ್ನದ ಲೇಪನ
ಈ ಹಸಿರಿನ ಚೆಲುವೇ ಕಂಗೊಳಿಸುತಿದೆ ಹೃನ್ಮನದ ತುಂಬ
ದೇವರ ಸೃಷ್ಟಿಯಲ್ಲಿಹುದು ಸೊಬಗು ನಿತ್ಯ ನೂತನ!!
