ಒಲವ ಮಳೆಗೆ ಸಂಭ್ರಮ ಇಳೆಗೆ
ಒಲವ ಮಳೆಗೆ ಸಂಭ್ರಮ ಇಳೆಗೆ
ಮಳೆ, ಮಳೆ, ಮಳೆ ಬೇಗ ಬಾರೆ ಮಳೆ
ಭುವಿಯು ತಂಪಾಗಬೇಕು ಈಗಿಂದೀಗಲೇ
ಎಲ್ಲೂ ಹಸಿರೇ ಇಲ್ಲ ಗಿಡವು ನಗುತಲಿಲ್ಲ
ಹಳ್ಳಕೊಳ್ಳ ತುಂಬದೆ ಬರಿದಾಗಿದೆ ನೋವಲ್ಲೇ!!
ಮಲಗೊ ಮುನ್ನ ಕರೆವೆ ಬೇಗ ಬಾರೇ ಮಳೆ
ಮುಂಜಾನೆ ತನಕ ಸುರಿದೋಗು ಕೇಳೆ ಪುಟ್ಟ ಮೊರೆ
ಹಗಲಲ್ಲೂ ಬಂದು ಕಾಮನಬಿಲ್ಲು ತಾರೆ
ನಲಿಯುತ ನಮ್ಮೊಂದಿಗೆ ಮರಳಿ ತೆರಳೆ!!
ಸುತ್ತೆಲ್ಲ ಹರಡಿರುವ ನೀರವ ಮೌನ
ಮಬ್ಬು ಕವಿದು ಮಂಕಾದ ವಾತಾವರಣ
ಕಾದ ಹೆಂಚಾಗಲು ಋತುಮತಿ ಪ್ರಕೃತಿ
ಒಲವ ಮಳೆ ಸಂಭ್ರಮ ಇಳೆಗೆ ಸುಕೃತಿ!!
