ನವರಾತ್ರಿ 7
ನವರಾತ್ರಿ 7
ಕಾಲರಾತ್ರಿ ದೇವಿ ನಿನ್ನಯ
ರೂಪ ನೋಡಲು
ದುಷ್ಟ ನಿಗ್ರಹಕಾಗಿ
ನಿಂತ ಶಕ್ತಿಯಂತಿದೆ॥
ಬಣ್ಣ ಕೇಸರಿ ಬೆಂಕಿಯಂತಿದೆ
ಹೊಳಪು ಪ್ರತಿಫಲ ನೀಡಿದೆ
ದುಷ್ಟ ಬುದ್ಧಿಯ ನೀಗಿ ನಮ್ಮಲಿ
ಜ್ಞಾನ ದೀಪವ ಬೆಳಗಿಸು॥
ಕರವ ಜೋಡಿಸಿ ಬೇಡಿಕೊಂಬೆನು
ಬಿಡದೆ ಸಲಹು ನಮ್ಮನೂ
ಜನರ ಒಳಿತಿಗೆ ಜಗದ ಒಳಿತಿಗೆ
ಮಾತೆ ನಿನ್ನಯ ಕೃಪೆಯ ತೋರು॥
