STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ನೀಲಿಬಣ್ಣ

ನೀಲಿಬಣ್ಣ

1 min
348

ವಸುದೇವನ ಸುತ

ಉಡುಪಿಯ ಒಡೆಯ

ನೀಲ ಮೇಘ ಶ್ಯಾಮ 

ನಮ್ಮ ಕಾಯುತಿರುವನು॥

ಆಗಸದ ನೀಲಿಯಲಿ 

ಹಗಲ ಹೂವದು ಅರಳಿ

ನಿತ್ಯ ಬೆಳಕ ನೀಡುವುದು|

ರಾತ್ರಿಯಾಗಸದಿ ಬೆಳ್ಳಿ ಚುಕ್ಕೆ

ಚಿತ್ತಾರ ಬಿಡಿಸಿಹುದು|

ಸಾಗರದ ನೀಲಿಯಲಿ 

ಮೀನುಗಳ ಹೆಜ್ಜೆಯ 

ಗುರುತಿಸಲು ಕಷ್ಟವಹುದು|

ಚಲನೆ, ನಿರಂತರತೆಯ

ಸಂಕೇತವಾಗಿಹ ಚಕ್ರ

ನಮ್ಮ ಧ್ವಜದಲಿಹುದು|

ಮನದ ಗೊಂದಲ ನೀಗಿ

ಶಾಂತತೆಯ ನೆಲೆಗೊಳಿಸಿ

ಸಮತೆಯನು ಕಾಯ್ವ ಬಣ್ಣ ॥


Rate this content
Log in

Similar kannada poem from Classics