ಮಳೆಗಾಲದ ಮಣ್ಣು ರಸ್ತೆ
ಮಳೆಗಾಲದ ಮಣ್ಣು ರಸ್ತೆ
ಧಾರಾಕಾರ ಸುರಿದಂತೆ ಮಳೆ
ಹೀರಲಾಗದ ನೀರ
ಹೊರಳಿಸಲೂ ಆಗದೇ
ಅಲ್ಲಲ್ಲೇ ಮಡುಗಟ್ಟಿ
ಕೊಳೆ , ಕೆಸರು ತುಂಬಿಕೊಂಡು
ಬಿದ್ದಿರುವ ಹೆದ್ದಾರಿಯಲಿ ಕಾಲಿಟ್ಟರೆ
ಸರಕ್ಕನೆ ಹೂತುಹೋಗುವ
ಇಲ್ಲವೇ ,
ಜರ್ರನೆ ಜಾರುವ
ನಾಟಿ ಮಾಡಬಹುದಾದ
ಜೇಡಿ ಮಣ್ಣು
ಸೌಜನ್ಯದ ಎಲ್ಲೆ ಮೀರಿದ
ಸಹ ವರ್ತಿಯ ಪ್ರಶ್ನೆಯಂತೆ&n
bsp;
ಸುರಿವ ಮಳೆ ನೀರ
ಸ್ವಲ್ಪ ತಿರುಗಿಸಿ
ಹಳ್ಳಕ್ಕೋ , ಕೊರಕಲಿಗೋ
ಸಾಗಿಸಿದರೆ ( ಹರಿಸಿದರೆ )
ನದಿ ಸೇರಿದ ನೀರು
ಪವಿತ್ರ ಜಲವಾಗುತ್ತಿತ್ತೋ ಏನೋ ....?
ಆದರೆ ,
ಕಡು ಲೋಭಿಯಂತೆ
ತನ್ನ ಒಡಲಲ್ಲೇ ಹುದುಗಿಸಿ
ಬಯಲ ಬಟ್ಟೆಯಾದ್ದರಲ್ಲೇ
ಸಾರ್ಥಕತೆ ಹೊಂದಿ
ಬಿಡು ಬೀಸಾಗಿ ಬಿದ್ದಿದೆ
ಈ ಮಣ್ಣು ರಸ್ತೆ !