Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Classics Inspirational Others

3  

Revati Patil

Classics Inspirational Others

ಹೆಸರಿನೊಳೇನಿದೆ ?

ಹೆಸರಿನೊಳೇನಿದೆ ?

1 min
236


ಏನಿದೆ ಈ ಹೆಸರೊಳು? 

ನಾ ಕೂಗಲು, 

ನೀ ತಿರುಗಲು.

ಹೆಸರಿಟ್ಟ ಉದ್ದೇಶವೇ ಇಷ್ಟು !


ಏತಕೀ ಹೆಸರಿನ ಗಣಿ ?

ಅವಳು ಶ್ರಾವಣಿ,

ಇವಳು ಪಾವನಿ.

ಒಂದೇ ಹೆಸರಿದ್ದರೇ ತೊಂದರೆ ನೂರೆಂಟೆಂದು

ನಾವೇ ಹುಡುಕಿದ ಮಾರ್ಗವೇ ಈ ಹೆಸರೆಂಬುದು.


ಹುಟ್ಟುತ್ತ ಕೂಸದು, ಕಂದವದು,

ಬೆಳೆಯುತ್ತ ಪುಟ್ಟ, ಪುಟ್ಟಿ, ಚಿನ್ನ-ರನ್ನವಾಗುವುದು

ಆದರೂ ಅದಕ್ಕೂ ಬೇಕಲ್ಲವೇ ಗುರುತೊಂದು

ಅದಕ್ಕೆ ನೀಡಿದರು ಹೆಸರೊಂದು.


ಧರ್ಮ-ಕರ್ಮಗಳಿಂದುಳಿವುದೇ ಹೆಸರು

ಹೊರತು, ದುಡ್ಡು-ಕಾಸುಗಳಿಂದಲ್ಲ.

ಹೆಸರಿಂದಲೇ ಅಳೆಯುವುದು ತರವಲ್ಲ.

ಸತ್ತ ಕ್ಷಣವೇ ನಿನ್ನ ಹೆಸರು ನಿನ್ನದಲ್ಲ, 

ನೀನೊಂದು ಹೆಣ ಮಾತ್ರ !


ಜಾತಿ-ಜಾತಕಗಳಾಚೆಗೂ ಲೋಕವಿದೆ

ಬರೀ ಹೆಸರಿನೊಳೇನಿದೆ...??


Rate this content
Log in

Similar kannada poem from Classics