STORYMIRROR

Lakshmi kanth

Inspirational

2  

Lakshmi kanth

Inspirational

ಗಜಲ್

ಗಜಲ್

1 min
116

ಧ್ಯಾನದಲ್ಲಿ ಕುಳಿತು ದ್ವೇಷದ ದಳ್ಳುರಿಯಲ್ಲಿ ಬೇಯುವವರನ್ನು ಏನೆಂದು ಕರೆಯಲಿ

ಮಾತಿನಲ್ಲೇ ಮನಸ್ಸು ಕೆಡಿಸುವ ಕಾಯಿಲೆ ಇರುವವರನ್ನು ಏನೆಂದು ಕರೆಯಲಿ


ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ಮರೆತು ಹೋದ ಸಂಭ್ರಮ ನಿನಗಿದೆ

ಕಾದ ಕಬ್ಬಿಣಕ್ಕೆ ನೀರು ಸುರಿದು ತಂಪು ಮಾಡುವವರನ್ನು ಏನೆಂದು ಕರೆಯಲಿ


ಸಾವಿಗೂ ನರಕ ತೋರಿಸುವ ವಿಶಾಲ ಹೃದಯ ಶ್ರೀಮಂತಿಕೆ ಮರೆಯಲಾಗದು

ಬರೆದ ಪದಗಳಿಗೆ ಮುಖವಾಡ ತೊಡಿಸಿ ಮೆರೆಯುವವರನ್ನು ಏನೆಂದು ಕರೆಯಲಿ


ಕಣ್ಣಿದ್ದೂ ಕುರುಡರಂತೆ ನಟಿಸುವ ಕಲೆಯ ದುಬಾರಿ ಬಳುವಳಿ ಕೊಟ್ಟಿದ್ದಾರೆ ನಿನಗೆ

ಕಣ್ಣ ಹನಿ ಸುರಿಸಿ ವಿಷ ಕಕ್ಕಿ ಕುರ್ಬಾನಿ ಆಗುವವರನ್ನು ಏನೆಂದು ಕರೆಯಲಿ


ಸ್ನೇಹಕ್ಕೂ ಸಮರ ಸಾರಿ ಕತ್ತಿ ಮಸೆಯುವ ಜನರಿದ್ದಾರೆ ಎಚ್ಚರ ‘ಲಕ್ಷ್ಮೀಶ’

ಲೇಖನಿ ಮುಳ್ಳಿಂದ ಚುಚ್ಚಿ ಸುಳ್ಳನ್ನು ಸತ್ಯವೆನ್ನುವವರನ್ನು ಏನೆಂದು ಕರೆಯಲಿ


Rate this content
Log in

More kannada poem from Lakshmi kanth

Similar kannada poem from Inspirational