ಗಾಂಧಿತಾತ
ಗಾಂಧಿತಾತ
ಭಾರತಾಂಬೆಯೆ ನಿನ್ನ ಬಸಿರಲಿ
ಉದಿಸಿ ಬಂದಿಹ ರತ್ನವೆನಿತೋ
ತಮ್ಮ ಕೊಡುಗೆಯ ನೀಡಿ ನಡೆದಿರುವ
ಪುಣ್ಯ ಪುರುಷರಸಾಲು ಎನಿತೋ..
ಅವರಲೊಬ್ಬನು ನಮ್ಮ ತಾತನು
ಅವರೆ ನಮ್ಮಯ ಗಾಂಧಿತಾತನು
ಸತ್ಯ ಅಹಿಂಸೆಯ ಪಾಲಕನವನು
ನ್ಯಾಯನೀತಿಗೆ ಸೇವಕನವನು
ದೀನದಲಿತರ ಬಂಧುವು
ಸ್ವಚ್ಛತೆಯ ಹರಿಕಾರನಹುದು
ನಮ್ರತೆಯ ಸಾಕಾರವಹುದು..
ಎಳೆಯರಿಗೆಲ್ಲಾ ಬಾಪೂಜಿಯಾಗಿ
ಬದುಕಿನಲ್ಲಿ ಮಹಾತ್ಮನಾಗಿ
ದೇಶಕ್ಕೆ ರಾಷ್ಟ್ರಪಿತನಾಗಿ
ಚಳವಳಿಗೆ ನೇತಾರನಾಗಿಹನು
ಸರಳ ಉಡುಗೆಯ
ಸರಳ ಬದುಕಿನ
ಸರಳತೆಯ ಹರಿಕಾರನು
ಜಗಕೆ ಶಾಂತಿಯ ದೂರನು
ನಗುಮೊಗದ ವೀರ
ಮಗುಮನದ ಧೀರ
ಸ್ವಾತಂತ್ರ್ಯ ಯೋಧ
ನಿಮಗಿದೋ ನಮನಗಳು
