ಬೂದುಬಣ್ಣ
ಬೂದುಬಣ್ಣ
ಕಟ್ಟಿಗೆ ಉರಿಸಲು
ಸಿಗುವುದು ಬೂದಿ
ಆಯಿತು ಅದುವೇ
ಬೂದು ಬಣ್ಣ॥
ದುಷ್ಟರ ನಾಶವ
ಸೂಚಿಪ ಬಣ್ಣ
ನೀಡಲಿ ಶಿಷ್ಟ ಗುಣದ
ಉದಯವನು ॥
ಬಣ್ಣವೇ ಅಲ್ಲದ ಬಣ್ಣಕೆ
ಹೆಸರೇ ಬೂದು
ಮಣ್ಣಿಗೆ ಸಾರವು
ಬೂದಿಯಿಂದ ಕೊಡುಗೆ॥
ಕಣ್ಣಿನ ಆಳಕೆ ಇಳಿದಿಹ ಬಣ್ಣವು
ಮನದ ಆಳದ ಕೆಡುಕು ನೀಗಿ
ಒಳಿತಿನ ಕಡೆಗೆ ಸಾಗಲು
ಅನುವು ಮಾಡುತಲಿರಲಿ॥