ಅಂಬರ
ಅಂಬರ
ನೀಲಾಕಾಶದ ಚುಕ್ಕಿ ತಾರೆಗಳು
ಕವಿದಿರುಳಲಿ ದೀಪಗಳಂತೆ ಬೆಳಗಿದರೆ
ಪ್ರೇಮಿಗಳಿಗೆ ಪ್ರೇಮ ಲೋಕವನ್ನು
ಸೃಷ್ಟಿಸಿತ್ತು ತನ್ನದೇ ಕಕ್ಷೆಯೊಳಗೆ
ಅತ್ತು ಗೋಳಾಡಿಸುವ ಪುಟ್ಟ ಕಂದನ
ಸಂತೈಸಲು ತಾಯಿಗೆ ಉಪಾಯವೇ
ಅಂಬರದ ಮೇಲೆ ನಗುವ ಚಂದಿರ
ಆಗಸವ ತೋರುತ್ತಾ ಮರೆಸಲು ಬೇಸರ
ಅತ್ತಿಂದಿತ್ತ ಸಂಚರಿಸಲು ಅಂಬರವೇ
ಮೋಡಗಳಿಗೆ ವಿಶಾಲ ವಾತಾವರಣ
ಮೋಡಗಳ ನಡುವಿನ ಸಂಘರ್ಷ
ಭುವಿಗೆ ವರ್ಷಧಾರೆಯ ಆಗಮನ
ಇಳಿಸಂಜೆಯ ನೀಲಾಕಾಶವ ಸೇರಲು
ಕಡಲ ತೆರೆಗಳಿಗೂ ಅದೇಕೋ ಕಾತುರ
ಸೂರ್ಯ ಚಂದಿರನ ನಡುವೆ
ನೆಲೆಸಬೇಕೆಂಬ ಆಸೆ ಅಂಬರದಲ್ಲೇ
