Chandana Krishna

Tragedy Classics

1  

Chandana Krishna

Tragedy Classics

ವರದ ಶಾಪ

ವರದ ಶಾಪ

9 mins
168


                               

 

ಮಹಾರಾಜ ಹಾಗು ಮಹಾರಾಣಿಯವರ ಸಮಾಧಿ ದಟ್ಟಾರಣ್ಯದ ಒಂದು ಗೌಪ್ಯವಾದ ಸ್ಥಳದ್ಲಲಿತ್ತು. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡಿದ್ದ ರಾಜಕುಮಾರ, ಪ್ರತಿ ಸಂಜೆ ಅಲ್ಲಿಗೆ ಬಂದು ತಾನು ಕಲಿಯುತ್ತಿದ್ದ ವಿಚಾರಗಳ ಬಗ್ಗೆ ಸಮಾಧಿಯ ಮುಂದೆ ಹೇಳಿಕೊಳ್ಳುತ್ತಿದ್ದ.


ಮಹಾರಾಜ ಹಾಗು ಮಹಾರಾಣಿಯವರು ಜೀವಂತವಿದ್ದಾಗ ರಾಜ್ಯದ ಉನ್ನತಿಗಾಗಿ ಹಾಗು ಪ್ರಜೆಗಳ ನೆಮ್ಮದಿ, ಸಂತೋಷ ಹಾಗು ರಕ್ಷಣೆಗಾಗಿ ತುಂಬಾ ಶ್ರಮಿಸಿ, ರಾಜಕುಮಾರನನ್ನು ಒಬ್ಬ ಒಳ್ಳೆಯ ರಾಜನನ್ನಾಗಿ ಮಾಡುವ ಆಸೆ ಅವರದಾಗಿತ್ತು. ದುಃಖದ ಸಂಗಾತಿಯಂದರೆ ರಾಜಕುಮಾರ ಕೇವಲ ೧೫ ವರ್ಷದವನಿದ್ದಾಗ ಅವನ ತಂದೆ-ತಾಯಿ ರಾಜ್ಯವನ್ನೇ ಕಿತ್ತುತಿನ್ನುತ್ತಿದ್ದ ಒಂದು ಮಹಾಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದರು. ಕಾಡುಗಿಚ್ಚಿನಂತೆ ಹಾರಾಡುತ್ತಿದ್ದ ಆ ಮಹಾಕಾಯಿಲೆಯಿಂದ ತಪ್ಪಿಸಿಕೊಳ್ಳಲು ಅರಮನೆಯಲ್ಲೆ ಇದ್ದಿದ್ದರೆ ಆಗುತ್ತಿತ್ತು ಆದರೆ ಪ್ರಜೆಗಳ ನೋವು-ನಲಿವು ತಮ್ಮದೇ ಎಂದು ತಿಳಿದಿದ್ದ ಮಹಾರಾಜ-ಮಹಾರಾಣಿಯರು ಪ್ರಜೆಗಳನ್ನು ಸಂತೈಸಲು ಹೋದಾಗ ಸತ್ತರು. ತನ್ನ ತಂದೆ-ತಾಯಿಗಳ ಆಸೆಯನ್ನು ಪೂರೈಸಲು ರಾಜಕುಮಾರ ಅಂದಿನಿಂದ ರಾಜ್ಯವನ್ನು ತನ್ನ ಮನೆಯಂತೆ ಭಾವಿಸಿ ಅದರ ರಕ್ಷಣೆಗಾಗಿ ಸಕಲ ವಿದ್ಯೆಗಳನ್ನು ಕಲಿಯುತ್ತಿದ್ದ.


ಕಾರ್ಮೋಡ ಕವಿದಿದ್ದ ಆಕಾಶ ಅಂದು ಜೋರಾಗಿ ಮಳೆ ಸುರಿಸುತ್ತಿತ್ತು. ರಾಜ ತನ್ನ ತಂದೆ-ತಾಯಿಯ ಸಮಾಧಿಯ ಬಳಿ ಕುಳಿತು ತಾನು ಎಲ್ಲಾ ವಿದ್ಯೆಗಳನ್ನು ಕಲಿತ್ತಿದ್ದು ಈಗ ಅವರು ಆಶಿಸಿದಂತೆಯೇ ರಾಜ್ಯವನ್ನು ಆಳುತ್ತೇನೆಂದು ಮಾತು ಕೊಟ್ಟು ಅಲ್ಲಿಂದ ಹಿಂತಿರುಗಿ ಬರಲು ಮಳೆನಿಂತು ಸೂರ್ಯನ ಕಿರಣಗಲಿ ಅವನ ಮೇಲೆ ಬಿದ್ದವು. 

ಈಗ ರಾಜಕುಮಾರನಿಗೆ ೨೦ ವರುಷ. ರಾಜನಾಗಿ ಅವನ ಪಟ್ಟಾಭಿಷೇಕವಾಯಿತು. ರಾಜ ನೋಡಲು ತುಂಬಾ ಸುಂದರವಾಗಿದ್ದ. ಅವನ ಕಣ್ಣುಗಳು ರಾತ್ರಿಯ ಚಂದ್ರನಂತೆ ಹೊಳೆಯುತ್ತಿದ್ದವು. ಅವನ ನಗುವು ಮುಂಜಾನೆ ಬೀಳುವ ರವಿಯ ತಿಳಿ ಕಿರಣಗಳಂತೆ ಇತ್ತು. ತುಂಬಾ ಎತ್ತರವಿದ್ದ, ಭುಜಗಳು ಅಗಲವಾಗಿದ್ದವು, ಅವನ ಕಾಲುಗಳು ದೇವಸ್ಥಾನದ ಸ್ತಾಂಭಗಳಂತೆ ಇದ್ದವು. ದ್ವನಿಯು ಆಳವಾಗಿತ್ತು. ಒಟ್ಟಾರೆಯಾಗಿ ರಾಜನು ಯಾವ ಚೆಲುವೆಯನ್ನಾದರೂ ಕೇವಲ ಕ್ಷಣಮಾತ್ರದಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದನು. ಆದರೆ ಅವನ ಮೊದಲ ಗುರಿ ತನ್ನ ತಂದೆ-ತಾಯಿಯ ಆಸೆಯಾಗಿತ್ತು. ಕಲಿತ ವಿದ್ಯೆಗಳನ್ನು ಪರೀಕ್ಷಿಸುವ ಸಮಯ ಈಗ ಬಂದಿತ್ತು. ರಾಜ್ಯದ ಯಾವುದೇ ಸಮಸ್ಯೆ ಬಂದರು ನಿಮಿಷಗಳಲ್ಲಿ ಬಗೆಹರಿಸಿ ಪ್ರಜೆಗಳ ಮನಸ್ಸನ್ನು ಕೆಲವೇ ವರುಷಗಳಲ್ಲಿ ಗೆದ್ದನು. ರಾಜ್ಯ ಉನ್ನತಮಟ್ಟಕ್ಕೆ ಬೆಳೆಯುತ್ತಾ ದೊಡ್ಡ ರಾಜ್ಯವಾಗುತ್ತಿತ್ತು.


ರಾಜ ಸುಮಾರು ೨೫ ವರ್ಷದವನಾದಾಗ  ದೇವಾಣಿ ಎಂಬ ಒಂದು ಸಾಮಾನ್ಯ ಪ್ರಜೆಯ ಮೇಲೆ ಪ್ರೀತಿ ಹುಟ್ಟಿತು. ಆಕೆ ಅನಾಥೆ ತಂದೆ-ತಾಯಿಯರು ಯಾರು ಎಂದು ಸಹ ಆಕೆಗೆ ತಿಳಿದಿರಲಿಲ್ಲ. ಕಾಡಿನಲ್ಲಿ ಒಂದು ಸುಂದರವಾದ ಗುಡಿಸಿಲಿನಲ್ಲಿ ವಾಸವಿದ್ದಳು. ದೇವಣಿಗೆ ರಾಜನನ್ನು ಕಂಡರೆ ತುಂಬಾ ಇಷ್ಟ. ಆಕೆಯನ್ನು ಕಂಡರೆ ರಾಜನಿಗೂ ಇಷ್ಟ ಎಂದು ಆಕೆಗೆ ತಿಳಿದಿರಲಿಲ್ಲ.


ಒಮ್ಮೆ ರಾಜ ತನ್ನ ತಂದೆ-ತಾಯಿಯ ಸಮಾಧಿಯ ಬಳಿ ಕೂತಿದ್ದಾಗ ಅವನಿಗೆ ಗೆಜ್ಜೆಯ ನಾದ ಕೇಳಿಸಿತು ಈ ದಟ್ಟಾರಣ್ಯದಲ್ಲಿ ಯಾವ ಹೆಂಗಸು ಬಂದಿರಬಹುದು ಎಂದು ಕುತೂಹಲದಿಂದ ಗೆಜ್ಜೆಯ ನಾದವನ್ನು ಹುಡುಕುತ್ತಾ ಹೋದ. ಒಂದು ಸುಂದರವಾದ ಹುಡುಗಿಯು ಮರದ ಬುಟ್ಟಿಯಲ್ಲಿ ಕಾಡಿನಲ್ಲಿ ಬೆಳೆದಿದ್ದ ಹಣ್ಣು ಹಾಗೂ ಹೂಗಳನ್ನು ಸಂಗ್ರಹಿಸುತ್ತಿದಳು. ಸಣ್ಣದಾಗಿ ಒಂದು ಹಾಡನ್ನು ಹಾಡುತ್ತಿದ್ದಳು ಒಂದು ಮಾವಿನ ಮರದಲ್ಲಿ ಜೇನು ಕಟ್ಟಿತ್ತು, ದೇವಾಣಿಗೆ ಮಾವಿನಹಣ್ಣು ಬೇಕಿತ್ತು ಒಂದೆರಡು ರೆಂಬೆಯನ್ನು ಹತ್ತಿದರೆ ಸಾಕು ಗೊಂಚಲು ಗಟ್ಟಲೆ ಮಾವಿನಹಣ್ಣು ಸಿಗುತ್ತಿದ್ದವು. ದೇವಣಿ ಮೆಲ್ಲಗೆ ಮರಹತ್ತಿ, "ದಯವಿಟ್ಟು  ನನ್ನ ಕಚ್ಚದಿರಿ, ಒಂದೆರೆಡು ಹಣ್ಣುಗಳನ್ನು ಮಾತ್ರ ಕಿತ್ತುಕೊಳ್ಳುತ್ತೇನೆ' ಎಂದು ಜೇನುಗಳಿಗೆ ಹೇಳಿದಳು. ಇದನ್ನು ಕಂಡ ರಾಜ ದೇವಣಿಯ ಮುಗ್ದತೆಯನ್ನು ಕಂಡು ಮನಸೋತು ನಸುನಕ್ಕನು. ಆಕೆಯನ್ನೇ ಹಿಂಬಾಲಿಸುವ ಆಸೆ ಅವನಿಗೆ ಹುಟ್ಟಿತು.


ದೇವಣಿಗೆ ರಾಜ ತನ್ನನ್ನು ಹಿಂಬಾಲಿಸುತ್ತಿರುವುದು ತಿಳಿಯಲೇ ಇಲ್ಲ, ಹುಷಾರಾಗಿ ಹಣ್ಣುಗಳನ್ನು ಕಿತ್ತು ದೇವಣಿಯು ಮರ ಇಳಿದು ಹಣ್ಣುಗಳನ್ನು ಬುಟ್ಟಿಯಲ್ಲಿ ಹಾಕಿ ನದಿಯ ಕಡೆ ನೆಡೆದಳು. ಹಣ್ಣುಗಳನ್ನು ತೊಳೆದು, ಹೂಗಳಿಗೆ ನೀರು ಚಿಮುಕಿಸಿ ಹಿಂತಿರುಗಿ ದಟ್ಟಾರಣ್ಯದ ಒಳಗೆ ನೆಡೆದಳು. ತುಂಬಾ ದೂರ ನೆಡೆದ ಮೇಲೆ ಒಂದು ಸುಂದರವಾದ ಶ್ರೀಕೃಷ್ಣನ ಮುರ್ತಿಯ ಮುಂದೆ ನಿಂತು, "ನೋಡು ಕೃಷ್ಣ ನಿನಗಾಗಿ ಹಣ್ಣುಗಳನ್ನು ತಂದಿದ್ದೇನೆ, ನೀನು ತಿನ್ನದಿದ್ದರೆ ನಾನು ನಿನ್ನನ್ನು ಮಾತನಾಡಿಸುವುದಿಲ್ಲ" ಎಂದು ಹೇಳಿ, ಹೂಗಳನ್ನು ಕೃಷ್ಣನಿಗೆ ಮೂಡಿಸುತ್ತ ಹಾಡತೊಡಗಿದಳು. ಪೂಜೆ ಮುಗಿಸಿ ಅವನ ಮುಂದೆ ಕುಳಿತು ತನ್ನ ಎಲ್ಲ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಿದ್ದಳು. ರಾಜನಿಗೆ ಎಲ್ಲವೂ ಕೇಳಿಸದಿದ್ದರೂ ಆಕೆಯನ್ನೇ ನೋಡುತ್ತಿದ್ದನು. ದೇವಾಣಿ ಕೃಷ್ಣನ ಬಳಿ ಏನೋ ಕೇಳಿಕೊಂಡಾಗ ಬಲಗಡೆಯಿಂದ ಹೂ ಬಿದ್ದಾಗ ಕೃಷ್ಣನನ್ನು ತಬ್ಬಿಕೊಂಡು ಅಳುತ್ತ ಧನ್ಯವಾದ ಹೇಳುತ್ತಿದ್ದಳು. ನಂತರ ಕೂತು ವಿಶ್ರಮಿಸುವಾಗ ಜಿಂಕೆ, ನವಿಲು, ಮೊಲಗಳು ಬಂದಾಗ ಅವುಗಳಿಗೆ ತಾನು ತಂದಿದ್ದ ಹಣ್ಣುಗಳನ್ನು ನೀಡುತ್ತಾ, ಅವುಗಳನ್ನು ಮುದ್ದಿಸುತ್ತಾ ಕೂತಳು. ನಂತರ ತನ್ನ ಗುಡಿಸಿಲಿಗೆ ಬಂದಳು. ತನ್ನನ್ನು ರಾಜ ಹಿಂಬಾಲಿಸುತ್ತಿರುವುದು ಆಕೆಗೆ ತಿಳಿದಿರಲಿಲ್ಲ. ಈಕೆಯೇ ತನ್ನ ರಾಣಿಯಾಗಿರುತ್ತಾಳೆಂದು ರಾಜನಿಗೆ ತಿಳಿದಿರಲಿಲ್ಲ.


ಮರುದಿನ ಮತ್ತೆ ರಾಜ ಆಕೆಯನ್ನು ಹುಡುಕಿಕೊಂಡು ಕಾಡಿಗೆ ಬಂಡ ಆದರೆ ಸಂಜೆಯಾದರೂ ದೇವಾಣಿಯನ್ನು ಕಾಣದ ರಾಜ ಹಿಂತಿರುಗುವಾಗ ದೇವಾಣಿಯನ್ನು ನೋಡಿದ. ಹಿಂದಿನ ದಿನವಿದ್ದ ಗೆಲುವು ಆಕೆಯಲ್ಲಿ ಇರಲಿಲ್ಲ. ಕೃಷ್ಣನ ವಿಗ್ರಹದಿಂದ ಸ್ವಲ್ಪ ದೂರ ಕೂತು, "ಕೃಷ್ಣ, ನಾನು ಎಂದೂ ಅನುಭವಿಸದ ಹೊಟ್ಟೆನೋವು ಇಂದು ಬಂದಿದೆ, ನಿನಗೆ ನಾನು ಯಾವ ಹಣ್ಣನ್ನೂ ತರಲು ಸಾಧ್ಯವಾಗಲಿಲ ನನ್ನನ್ನು ಕ್ಷಮಿಸು" ಎಂದು ಹೇಳುತ್ತಾ ನೋವಿನಲ್ಲೇ ಕೃಷ್ಣನಿಗೆ ಹಾಡನ್ನು ಹಾಡಿದಳು. ನಂತರ ತನಗೆ ರಾಜನನ್ನು ಕಂಡರೆ ಇಷ್ಟ, ದಿನವೂ ಕನಸಿನಲ್ಲಿ ಬರುವನು ಎಂದು ನಾಚಿಕೆಯಿಂದ ನಗುತ್ತ ಹೇಳಿದಳು. ಇದನ್ನು ಕೇಳಿದ ರಾಜ ಖುಷಿಪಟ್ಟರೂ, ಆಕೆಯ ನೋವಿಗೆ ತಾನು ಏನೂ ಮಾಡಲು ಸಾದ್ಯವಾಗಲಿಲ್ಲವೆಂದು ಬೇಸರಪಟ್ಟನು. ತಾನು ಹಿಂಬಾಲಿಸುತ್ತಿರುವುದು ಆಕೆಗೆ ತಿಳಿದರೆ ತನ್ನನ್ನು ತಪ್ಪುತಿಳಿಯಬಹುದೆಂದು ದೂರ ನಿಲ್ಲಿತ್ತಾನೆ. ದೇವಾಣಿಯು ತನ್ನ ಗುಡಿಸಿಲಿಗೆ ಬಂದಾಗ ರಾಜನು ತನ್ನ ಸೈನಿಕರನ್ನು ದೇವಾಣಿಯ ಗುಡಿಸಿಲಿಗೆ ಕಳುಹಿಸಿ, ಆಕೆಯ ಆರೋಗ್ಯವನ್ನು ನೋಡಿಕೊಂಡು, ಹಾಗೆಯೇ ಆಕೆಗೇ ಹಣ್ಣು-ಹಂಪಲುಗಳನ್ನು ನೀಡಿ ಬರುವುದಾಗಿ ಹೇಳಿದ. ಸೈನಿಕರು ಬಂದು ಹೋದ ಮೇಲೆ ದೇವಾಣಿಗೆ ಅದು ವಿಚಿತ್ರವೆನಿಸಿದರೂ, ಕೃಷ್ಣನ ಕೃಪೆಯೇ ಕಾರಣವೆಂದು ನಕ್ಕು ಗುಡಿಸಿಲ ಒಳಗೆ ಹೋದಳು.


ಮುಂಜಾನೆ ದೇವಾಣಿಯು ಹೂ-ಹಣ್ಣುಗಳನ್ನು ಸಂಗ್ರಹಿಸಿ ಸಂತೆಗೆ ತಂದು ಮಾರುತ್ತಿದ್ದಳು. ರಾಜನು ಆಕೆಯನ್ನು ನೋಡಿ, ಅವಳ ಬಳಿ ಬಂದು ಹೂ-ಹಣ್ಣುಗಳನ್ನು ಕಂಡು ಆಕೆಯ ಹೆಸರು ಕೇಳಿದ. ದೇವಾಣಿಯು ತಲೆ ಎತ್ತದೆ ರಾಜನಿಗೆ ನಮಸ್ಕರಿಸಿ, ತನ್ನ ಹೆಸರನ್ನು ಹೇಳಿದಳು. ರಾಜ ಹೊರಡುವಾಗ, "ದೇವಣಿ, ನೀನು ನನ್ನನ್ನು ಒಬ್ಬ ಒಳ್ಳೆ ಸ್ನೇಹಿತನಂತೆ ನೋಡಬಹುದು" ಎಂದು ಹೇಳಿ ಹೊರಟನು. ದೇವಾಣಿಗೆ ಎಲ್ಲಿಲ್ಲದ ಸಂತೋಷ. ಆಕೆಯನ್ನು ತಿಳಿದಿದ್ದ ಕೆಲವರು ಅವಳ ಬಳಿ ಬಂದು, 'ನೀನು ಅದೃಷ್ಟವಂತೆ' ಎಂದರು. ಆದರೆ ಅದು ಅವಳ ದುರಾದೃಷ್ಟ ಅವರಿಗೆ ಈಗ ತಿಳಿದಿರಲಿಲ್ಲ.      

ಸಂಜೆ ಎಂದಿನಂತೆ ದೇವಾಣಿ ಶ್ರೀಕೃಷ್ಣನ ಬಳಿ ಹೋಗಿ ಪೂಜಿಸಿ ನಂತರ ರಾಜನ ಬಗ್ಗೆ ನಾಚುತ ಹೇಳಲು ಆರಂಭಿಸಿದಳು. ರಾಜನು ಆಕೆಯನ್ನೇ ದೂರದಿಂದ ನೋಡುತ್ತಾ ನಕ್ಕನು.

ಕೆಲವು ದಿನ ಹೀಗೆ ಕೇಳಿಯಿತು. ಒಂದು ದಿನ ತಾಳಲಾರದೆ ರಾಜನು ದೇವಾಣಿಯ ಬಳಿ ಬಂದು, ತನ್ನ ಕುದುರೆಯಿಂದ ಇಳಿದು, "ದೇವಾಣಿ, ನಿನ್ನನ್ನು ನಾನು ತುಂಬಾ ದಿನದಿಂದ ನೋಡುತ್ತಿದ್ದೇನೆ. ನನ್ನ ಮನಸ್ಸಿನಲ್ಲಿ ನಿನಗೆ ಮಾತ್ರ ಜಾಗ. ನೀನು ಒಪ್ಪುವುದಾದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ನೀನು ಒಪ್ಪುವೆಯಾ?" ಎಂದು ಕೇಳುತ್ತಾನೆ. ದೇವರು ನಾಚಿಕೆಯಿಂದ ಮೆಲ್ಲಗೆ ಹೌದು ಎಂಬಂತೆ ತಲೆ ಆಡಿಸಿದಾಗ ರಾಜ, "ನಿನ್ನ ಕೆಲಸ ಮುಗಿದ ಮೇಲೆ ನನ್ನ ಸೈನಿಕರೊಟ್ಟಿಗೆ ಅರಮನೆಗೆ ಬಾ" ಎಂದು ಹೇಳಿ ಹೊರಟನು. ದೇವಾಣಿ ಅರಮನೆಗೆ ಬಂದಾಗ ಆಕೆಯನ್ನು ಎಲ್ಲರಿಗೂ ಪರಿಚಯಿಸಿ, ಮಂತ್ರಿಯನ್ನು ಕರೆದು, ಎಲ್ಲ ಪ್ರಜೆಗಳು ಸಂಜೆ ಅರಮನೆಯ ಬಳಿ ಬರಬೇಕೆಂದು ಢಂಗೂರ ಬಡಿಸು ಎಂದು ಹೇಳುತ್ತಾನೆ.

ದೇವಾಣಿಗೆ ಅರಮನೆಯನ್ನು ತೋರಿಸಿ, ರಾಜಗುರುಗಳ ಬಳಿ ಕರೆದೊಯ್ದು ಆಕೆಯನ್ನು ಮುಂಬರುವ ದಿನಗಳಿಗೆ ತಯಾರು ಮಾಡಿ ಎಂದು ದೇವಾಣಿಯನ್ನು ರಾಜಗುರುಗಳಿಗೆ ವಿಧ್ಯಾರ್ಥಿಯನ್ನಾಗಿ ಒಪ್ಪಿಸಿ, ನಂತರ ಅರಮನೆಯ ಮುಂದಿನ ಕೈತೋಟದಲ್ಲಿ ರಾಜ ಹಾಗು ದೇವಾಣಿಯು ಪರಸ್ಪರ ಒಬ್ಬರನ್ನೊಬ್ಬರು ತಿಳಿಯಲು ಪ್ರಯತ್ನಿಸಿದರು. ದೇವಾಣಿ ತಾನು ರಾಜನನ್ನು ಪ್ರೀತಿಸುತ್ತಿದ್ದೇನೆ, "ನನಗೆ ಯಾರು ಇಲ್ಲ, ತಂದೆ-ತಾಯಿಯಾರೆಂದು ತಿಳಿದಿಲ್ಲ, ಕೃಷ್ಣನೇ ಎಲ್ಲ, ಇಷ್ಟು ದೊಡ್ಡ ಅರಮನೆ ಇಲ್ಲ, ಪುಟ್ಟದೊಂದು ಗುಡಿಸಿಲು ಕಾಡಿನಂಚಿನಲ್ಲಿದೆ, ನೀವು ನನ್ನನ್ನು ಹೇಗೆ ಇಷ್ಟ ಪಡುತ್ತೀರೆಂದು ತಿಳಿದಿಲ್ಲ" ಎಂದು ಅಳುತ್ತ ಹೇಳಿದಳು. ರಾಜನು ಆಕೆಯ ಭುಜದ ಮೇಲೆ ಕೈ ಇಟ್ಟ ಅವಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳಿ, ತಾನು ಹಿಂಬಾಲಿಸುತ್ತಿದ್ದು, ಎಲ್ಲವನ್ನೂ ಹೇಳಿದ. ಇದನ್ನು ಕೇಳಿ ದೇವಾಣಿ ನಾಚಿಕೆಯಿಂದ ನಗುತ್ತಾ ಕಂಬನಿಗಳನ್ನು ಒರೆಸಿಕೊಂಡಳು.ಊಟದ ಸಮಯ ಬಂದಾಗ ದೇವಾಣಿಯೊಂದಿಗೆ ರಾಜ ಊಟಮಾಡಿ, ತನ್ನ ತಂದೆ-ತಾಯಿಯರ ಬಗ್ಗೆ ಮಾತನಾಡುತ್ತ ಕುಳಿತರು. ಸಮಯ ಕಳೆದದ್ದೇ ತಿಳಿಯಲಿಲ್ಲ. ಸಂಜೆಯ ಹೊತ್ತಿಗಾಗಲೇ ಪ್ರಜೆಗಳಲ್ಲೆಲ್ಲರೂ ಅರಮನೆಯ ಮುಂದೆ ಬಂದಿದ್ದರು. ರಾಜನು ಅವರಿಗೆ ನಮಸ್ಕರಿಸಿ, ದೇವಾಣಿಯ ಬಗ್ಗೆ ಹೇಳಿ, "ಮದುವೆಯಾಗುವವರೆಗೆ ದೇವಾಣಿಯು ತನ್ನನ್ನು ಎಲ್ಲರೂ ಸಾಮಾನ್ಯರಂತೆ ನೋಡಲು ಇಚ್ಚಿಸುತ್ತಾಳೆ ಆದ್ದರಿಂದ ಎಲ್ಲರೂ ಆಕೆಯನ್ನು ಸಾಮಾನ್ಯಳಂತೆಯೇ ನೋಡಿ. ಕೆಲವು ದಿನಗಳ ಬಳಿಕ ನಾವು ಮದುವೆಯಾಗುತ್ತೇವೆ" ಎಂದು ಹೇಳಿ ಪ್ರಜೆಗಳಿಗೆ ಸಿಹಿ ಹಂಚಿಸಿದನು.

ದಿನಗಳು ಕಳೆದವು, ದೇವಾಣಿಯು ತನಗೆ ಹೇಳಿಕೊಟ್ಟ ಎಲ್ಲಾ ವಿಷಯಗಳನ್ನು ಕಲಿತು, ಬೇಗನೆ ಎಲ್ಲದರಲ್ಲೂ ನಿಪುಣತೆ ಪಡೆದಳು. ನೃತ್ಯ, ಸಂಗೀತ, ಮುಂಚೆಯೇ ತಿಳಿದಿದ್ದ ದೇವಾಣಿಗೆ ಬೇರೆಯವುದನ್ನು ಕಲಿಯಲು ತುಂಬಾ ಸಮಯ ಬೇಕಾಗಲಿಲ್ಲ. ಕತ್ತಿವರಸೆ, ಕಲಾರೀಪಟ್ಟು, ಹಾಗು ಮುಂತಾದ ಬಗೆಯ ಸಮರ ಕಲೆಗಳು, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮುಂತಾದವುಗಳನ್ನು ಕಲಿತಳು. ಕೆಲವೊಮ್ಮೆ ರಾಜನಿಗೇ ಸಲಹೆ ನೀಡುವಷ್ಟರ ಮಟ್ಟಿಗೆ ಅವಳು ವಿದ್ಯಾವಂತಳಾದಳು.


ಮದುವೆ ತಯಾರಿ ನೆಡೆಸಲು ಶುರುಮಾಡುವಾಗ ರಾಜನಿಗೆ ಮುಸ್ಲಿಂ ರಾಜ್ಯದ ದೊರೆ ಫಹಾನ್ ನ ಬೆದರಿಕೆ ಬಂತು. ಫಹಾನ್ ತಾನು ತನ್ನ ಸೈನ್ಯದೊಡನೆ ಬೇಗನೇ ಬರುತ್ತೇನೆ ಯುದ್ಧಕ್ಕೆ ತಯಾರಾಗಿರು ಎಂದು ರಾಜನಿಗೆ ಪತ್ರ ಕಳಿಸಿದ್ದ. ರಾಜನಿಗೆ ತಾನು ಖಂಡಿತವಾಗಿಯೂ ಗೆಲ್ಲುತ್ತೀನೆ ಎಂಬುದು ತಿಳಿದಿತ್ತು.

ಇಂತಹ ಸಮಯದಲ್ಲಿ ಮದುವೆ ಸಾಧ್ಯವಿಲ್ಲ ಎಂದು ತಿಳಿದಿದು ರಾಜನು ಯುದ್ಧಕ್ಕೆ ಸಿದ್ದನಾದ. ದೀವಾಣಿಯು ತುಂಬಾ ಉಪಕರವಾದ ಸಲಹೆಗಳನ್ನು ನೀಡುತ್ತಿದ್ದಳು. ರಾಜನಿಗೆ ಅವಳ ಮೇಲೆ ಪ್ರೀತಿ ಉಕ್ಕಿ ಬಂತು. ಯುದ್ಧಕ್ಕೆ ಹೋಗುವ ಮುನ್ನ ರಾಜ್ಯವನ್ನು ತಾನು ಬರುವವರೆಗೂ ದೇವಾಣಿಯೇ ನೆಡೆಸಬೇಕೆಂದು ಆದೇಶಿಸಿ, ಆಕೆಯ ಬಳಿ ಮಾತನಾಡಿ, ದೀವಾಣಿಗಾಗಿಯೇ ಬೇಗ ಬರುತ್ತೇನೆಂದು ಹೇಳಿ ಹೋದ.


ವಾರ ಕಳೆದರೂ, ತಿಂಗಳು ಉರುಳಿದರೂ, ಯುದ್ಧ ನಿಲ್ಲಲೇ ಇಲ್ಲ. ಫಹಾನ್ ನ ಸೈನಿಕರು ಲಕ್ಷಗಟ್ಟಲೆಯಿದ್ದರೂ, ರಾಜನ ಸೈನಿಕರಂತೆ ಶಕ್ತಿಶಾಲಿಗಳಾಗಿರಲಿಲ್ಲ. ರಾಜನು ಫಹಾನ್ ನ ಸೋಲಿಸಿ ರಾಜ್ಯಕ್ಕೆ ಜಯ ತರಲು ಹೋರಾಡಿದ. ಸಾಧ್ಯವಾದಾಗ ದೇವಾಣಿಗೆ ಪತ್ರ  ಬರೆಯುತ್ತಿದ್ದ. ತನ್ನ ನೋವು, ದೇವಾಣಿಯ ಮೇಲಿದ್ದ ಪ್ರೀತಿ, ಎಲ್ಲವನ್ನೂ ತಿಳಿಸುತ್ತಿದ್ದ, ದೇವಾಣಿಗೆ ತನ್ನ ರಾಜನ ಪತ್ರ ಬಂದಾಗ ಎಲ್ಲಿಲ್ಲದ ಸಂತೋಷ. ಆದರೂ ರಾಜನು ತನ್ನ ಬಳಿ ಇಲ್ಲದ್ದರಿಂದ ಆಕೆಯ ನೋವು ಹೇಳತೀರದು. ಎಲ್ಲಾ ಸಮಯದಲ್ಲೂ ರಾಜ್ಯವನ್ನು ನೋಡಿಕೊಳ್ಳುವ ಹೊಣೆ ಅವಳ ಮೇಲೆ ಬಿತ್ತು. ಬಿಡುವಾದಾಗ ತನ್ನ ಕೃಷ್ಣನ ಬಳಿಹೋಗಿ ಆಕೆಯ ನೋವನ್ನು ಹಂಚಿಕೊಳ್ಳುತ್ತಿದ್ದಳು. ತನ್ನ ರಾಜ ಕ್ಷೇಮವಾಗಿ ಮರಳಿ ಬರಲಿ, ಅವನಿಗೆ ಜಯ ಸಿಗಲಿ ಎಂಬುದೊಂದೇ ಅವಳ ಬೇಡಿಕೆಯಾಗಿತ್ತು. ಹಸಿವಿಲ್ಲದೆ, ನಿದಿರೆಯಿಲ್ಲದೆ ತನ್ನ ರಾಜನನ್ನೇ ನೆನೆಯುತ್ತಿದ್ದಳು. ಆದರೂ ಇದನ್ನು ಯಾರ ಬಳಿಯೂ ಹೇಳುತ್ತಿರಲಿಲ್ಲ ನೋವನ್ನು ಮರೆಯಲು ತಾನು ಕಲಿತಿದ್ದ ಎಲ್ಲಾ ಸಮರ ಕಲೆಗಳನ್ನು ಕಠಿಣವಾಗಿ ಅಭ್ಯಸಿಸುತ್ತಿದ್ದಳು.


ಒಮ್ಮೊಮ್ಮೆ, ಮಹಾರಾಜ-ಮಹಾರಾಣಿಯವರ ಸಮಾಧಿಯ ಬಳಿ ಹೋಗಿ ಅಳುತ್ತಿದ್ದಳು. ಎಷ್ಟು ನೋವಿದ್ದರೂ, ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಿದಳು.


ರಾಜ್ಯದಲ್ಲಿ ಹೊಸದಾಗಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಆಸಕ್ತಿಯಿರಿವವರಿಗೆ ಸಮರ ಕಲೆಗಳು, ನೃತ್ಯ-ಸಂಗೀತ, ಸೇನಾ ತರಬೇತಿ ಮುಂತಾದವುಗಳನ್ನು ಹೇಳಿಕೊಡಲು ಆದೇಶಿಸಿದಳು. ಅರಮನೆಯನ್ನು ಇನ್ನೂ ಸುಂದರವಾಗಿ ಕಾಣುವಂತೆ ಬದಲಾವಣೆಗಳನ್ನು ಮಾಡಿದಳು. ಪ್ರಜೆಗಳು ಅವಳನ್ನು ಯಾವಾಗಲೂ ಹೊಗಳುತ್ತಿದ್ದರು. ಪ್ರಜೆಗಳ, ರಾಜನ ಹಾಗು ದೇವಾಣಿಯ ದೊಡ್ಡ ಆಸೆ ರಾಜ ಹಾಗು ದೇವಾಣಿಯರ ಮದುವೆಯಾಗಿತ್ತು. ಆದರೆ ದೇವಾಣಿ ರಾಜನ ಪತ್ರಗಳನ್ನು ಮಾತ್ರ ನೋಡುತ್ತಿದ್ದಳು ರಾಜನನ್ನು ಅಲ್ಲ.  


ಹೀಗೆ ೩ ವರ್ಷ ಕಳೆಯಿತು ರಾಜನು ಫಹಾನ್ ನನ್ನು ಹಿಡಿದು ಬಂಧಿಸಿದನು. ಇದನ್ನು ಕೇಳಿ ತಿಳಿದ ದೇವಾಣಿಗೆ ಎಲ್ಲಿಲ್ಲದ ಖುಷಿ. ತನ್ನ ರಾಜ ಕೊನೆಗೂ ವಿಜಯನಾಗಿ ಬರುತ್ತಿರುವನು ಎಂದು ತನ್ನ ಕೃಷ್ಣನ ಮುಂದೆ ಹೇಳಿ ಖುಷಿ ಇಂದ ಅಳುತ್ತಿದ್ದಳು.


ರಾಜ ಹಿಂತಿರುಗಿ ಬಂದಾಗ ದೇವಾಣಿ ಅರಮನೆಯಲ್ಲಿ ಇರಲಿಲ್ಲ. ರಾಜನು ಕೂಡಲೇ ದಟ್ಟಾರಣ್ಯದಲ್ಲಿದ್ದ ಶ್ರೀಕೃಷ್ಣನ ವಿಗ್ರಹದ ಬಳಿ ಬಂದು ದೂರದಲ್ಲಿ ಕೂತು ದೇವಾಣಿಯನ್ನು ನೋಡಿದ. ಮೊದಲ ಬಾರಿ ನೊಡ್ಡಿದ ಮುಗ್ದ ದೇವಾಣಿಯನ್ನು ಮತ್ತೆ ನೋಡಿದಂತಾಯಿತು. ದೇವಾಣಿಯು ಮುಂಚೆಗಿಂತ ತುಂಬಾ ಸುಂದರವಾಗಿ ಕಾಣುತ್ತಿದ್ದಳು.

ಇನ್ನು ತಾಳಲಾರದೆ ರಾಜ ಜೋರಾಗಿ 'ದೇವಾಣಿ' ಎಂದು ಕೂಗಿದ. ಆಕೆ ಸಂತೋಷದಿಂದ ಅವನ ಬಳಿ ಓಡಿ ಬಂದು ಬಿಗಿದಪ್ಪಿದಳು. ದೂರವಿದ್ದ ಎರಡು ಪ್ರೇಮಿಗಳು ಒಂದಾದದ್ದನ್ನು ಕಂಡು ಮಳೆ ಸುರಿಯಿತು. ನವಿಲುಗಳು ನಾಟ್ಯವಾಡಿದವು.


ದೇವನಿಯೊಂದಿಗೆ ಮಾಡುವೆ ನೆಡೆಯಿತು, ದೇವಾಣಿ ಈಗ ರಾಣಿಯಾಗಿದ್ದಳು. ರಾಜನಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ರಾಜ್ಯದ ಎಲ್ಲರಿಗೂ ಔತಣವನ್ನು ಏರ್ಪಾಡು ಮಾಡಿಸಿದ್ದ. ಫಹಾನ್ ನ ರಾಜ್ಯವೂ ಈಗ ರಾಜನ ಕೆಳಗಿತ್ತು.

ಫಹಾನ್ ಗೆ ಒಂದು ಸುಂದರವಾದ ಮಗಳಿದ್ದಳು.ಈ ವಿಷಯ ರಾಜನಿಗೆ ತಿಳಿದಿರಲಿಲ್ಲ. ಆಕೆಯ ಹೆಸರು ಇನಾಯ. ಅತಿಲೋಕ ಸುಂದರಿಯಂತಿದ್ದ ಇನಾಯಳು ದೂರ ರಾಜ್ಯಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುತಿದ್ದಳು. ತುಂಬಾ ಮುದ್ದಾಗಿ ಸಾಕಿದ್ದರಿಂದ ಇನಾಯಳನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ತಾಯಿಯನ್ನು ಕಳೆದುಕೊಂಡಿದ್ದ ಇನಾಯಳನ್ನು ತಂದೆ ಫಹಾನ್ ಹಾಗು ಐವರು ಸಹೋದರರು ಮುದ್ದಾಗಿ, ಪ್ರೀತಿಯಿಂದ, ಆಕೆ ಕೇಳಿದ್ದನ್ನೆಲ್ಲಾ ನೀಡಿ ಸಾಕಿ ಸಲುವಿದ್ದರು. ತನ್ನ ತಂದೆಯನ್ನು ಬಂಧಿಸಲಾಗಿದೆ, ಸಹೋದರರನ್ನು ಕೊಳ್ಳಲಾಗಿದೆ ಎಂದು ತಿಳಿದ ಇನಾಯಳ ದುಃಖ ಹೇಳತೀರದು.


ದೂರದೂರಿನಿಂದ ಸಮುದ್ರಮಾರ್ಗದಲ್ಲಿ ಇನಾಯ ತಿಂಗಳು ಗಟ್ಟಲೆ ಪ್ರಯಾಣಿಸಿ ರಾಜನ ಅರಮನೆಗೆ ಬಂದಳು. ಅಥಿತಿ ಸತ್ಕಾರಕ್ಕೆ ರಾಜನು ಪ್ರಸಿದ್ಧನಾಗಿದ್ದನು. ಇನಾಯ ತನ್ನನ್ನು ಭೀತಿಯಾಗಲು ಸಮುದ್ರಗಳನ್ನು ದಾಟಿ ಬಂದಿದ್ದಾಳೆಂದು ತಿಳಿದ ರಾಜ ಆಕೆಯನ್ನು ಮತ್ತಷ್ಟು ಆಧಾರದಿಂದ ಸ್ವಾಗತಿಸಿದನು. ತನ್ನ ತಂದೆಯನ್ನು ಬಂಧಿಸಿದ್ದೀರಾ, ಅವರು ಮಾಡಿದ್ದು ತಪ್ಪು ಎಂದು ಹೇಳಿ ದಯವಿಟ್ಟು ಅವರನ್ನು ಭೇಟಿಯಾಗಲು ಅವಕಾಶಮಾಡಿಕೊಡಿ ಎಂದು ರಾಜನಲ್ಲಿ ಬೇಡಿಕೊಂಡಳು. ರಾಜ ಒಪ್ಪಿಕ್ಕೊಂದು ಅನುಮತಿ ನೀಡಿದನು.


ಹುಲಿಗಳನ್ನು ಸಾಕುಪ್ರಾಣಿಗಳಂತೆ ಸಾಕಿದ್ದ ತನ್ನ ತಂದೆಯನ್ನು ಆ ಸ್ಥಿತಿಯಲ್ಲಿ ನೋಡಿ ಇನಾಯಳ ಕಣ್ಣು ಕೆಂಪಾದವು. ಆದರೆ ತನ್ನ ಕೋಪವನ್ನು ಯಾರಿಗೂ ತೋರಿಸದೆ ತನ್ನ ತಂದೆಯನ್ನು ತಬ್ಬಿಹಿಡಿದು, ಅತ್ತು, ರಾಜನನ್ನು ಕೊಲ್ಲುವ ಶಪಥ ಮಾಡಿದಳು. ತನ್ನ ಪರಿವಾರವನ್ನು ನಾಶಮಾಡಿ ರಾಜನು ಮದುವೆಯಾಗಿದ್ದಾನೆ ಎಂದು ತಿಳಿದ ಇನಾಯಳ ದ್ರಿಷ್ಟಿ ನೇರವಾಗಿ ದೇವಾಣಿಯ ಮೇಲೆ ಬಿತ್ತು.


ದೇವಾಣಿಯ ಮೇಲೆ ಕೆಟ್ಟ ಹೆಸರು ತಂದು ರಾಜನನ್ನು ಮದುವೆಯಾಗಿ ರಾಜ್ಯ ತನ್ನದಾದ ಮೇಲೆ ರಾಜನನ್ನು ಬಂಧಿಸಿ ತನ್ನ ತಂದೆಯನ್ನು ಅದೇ ರಾಜ್ಯಕ್ಕೆ ರಾಜನನ್ನಾಗಿ ಮಾಡುವ ಕೆಟ್ಟ ಆಸೆ ಇನಾಯಳದ್ದು. "ಅಲೆಗಳ ತೀವ್ರತೆಯಿಂದಾಗಿ ನಾನು ಸಧ್ಯದಲ್ಲೇ ನನ್ನ ದೇಶಕ್ಕೆ ಮರಳಿ ಹೋಗಲು ಸಾಧ್ಯವಿಲ್ಲ. ನಿಮ್ಮಲ್ಲಿ ನನಗೆ ಒಂದು ಸಣ್ಣ ಜಾಗವಿದ್ದರೆ ನನಗೆ ನೀಡಿ. ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ" ಎಂದಳು. ಸೌಂದರ್ಯದಲ್ಲಷ್ಟೇ ಅಲ್ಲದೆ, ಮಾತಿನಲ್ಲಿಯೂ ಎಲ್ಲರನ್ನು ಗೆಲ್ಲುತ್ತಿದ್ದಳು. ರಾಜನು ತಕ್ಷಣವೇ ಒಪ್ಪಿಕೊಂಡು ಆಕೆಗೆ ಅರಮನೆಯಲ್ಲಿಯೇ ಒಂದು ದೊಡ್ಡ ಕೋಟೆಯನ್ನು ನೀಡಿದ.

ದೇವಾನಿಗೆ ಇನಾಯಳ ಸಂಚು ತಿಳಿದಿದ್ದರೂ ಅಥಿತಿಯ ಮೇಲೆ ಸಂಶಯ ಪಡಬಾರದು ಎಂದು ಸುಮ್ಮನಿದ್ದಳು. ಮದುವೆಯಾದಾಗಿನಿಂದ ದೇವನಿಗೆ ಇದ್ದ ಒಂದೇ ಆಸೆ 'ಮಗು' ಒಂದಾದರು ಮಗು ಸದ್ಯದಲ್ಲೇ ಬೇಕೆಂದು ಯಾವಾಗಲೂ  ಕನಸುಕಾಣುತ್ತಿದ್ದಳು. ಈ ಆಸೆಯನ್ನು ರಾಜನ ಬಳಿ ಇಟ್ಟಳು. ರಾಜನು ತನಗೂ ಮಕ್ಕಳು ಬೇಕೆಂದು ತಿಳಿಸಿದ. ಪಕ್ಕದಲ್ಲೇ ಆಪತ್ತು ಕಾದಿದೆ ಎಂದು ಇಬ್ಬರೂ ಗಮನಿಸದೆ ಹೋದರು.


ದೇವಾಣಿ ೩ ವರ್ಷ ಏಕಾಂಗಿಯಾಗಿ ರಾಜನಿಗೆ ಕಾಯುತ್ತಾ, ನೋವಿನಲ್ಲೇ ಬಳಲುತ್ತಿದ್ದ ದಿನಗಳನ್ನು ಆಗಾಗ ನೆನೆಯುತ್ತಿದ್ದಳು. ರಾಜನಿಗೂ ಇದು ತಿಳಿದಿತ್ತು. ತಾನು ಈಗ ಜೊತೆಗಿರುವೆ ಯಾವಾಗಲೂ ಇರುವೆ, ಚಿಂತೆಬೇಡೆಂದು ರಾಜನು ಹೇಳುತ್ತಿದ್ದನು. ಅವರ ಪ್ರೀತಿಯನ್ನು ನೋಡಿ ಚಂದ್ರನು ನಕ್ಕರೂ, ನಕ್ಷತ್ರಗಳು ಮುಂಬರುವ ದಿನಗಳ ಬಗ್ಗೆ ಚಂದ್ರನಿಗೆ ನೆನೆಸಿದಾಗ ಅವನು ಮಂಕಾಗುತ್ತಿದ್ದ.


ಇನಾಯ ತನ್ನ ಸಮಯವನ್ನು ಹೆಚ್ಚಾಗಿ ತಂದೆ ಫಹಾನ್ ನೊಂದಿಗೆ ಕಳೆಯುತ್ತಿದ್ದಳು. ಮೆಲ್ಲನೆ ತಂದೆಗೆ ಇತರೆ ಖೈದಿಗಳಿಗೆ ಕೊಡುವ ಆಹಾರದ ಬದಲು, ರಾಜನಿಗೆ ಮಾಡಿದ ಆಹಾರ ಬರುವಂತೆ ಮಾಡಿದಳು. ತನ್ನ ತಂದೆಗೆ ಯಾವುದೇ ತೊಂದರೆ ಬಾರದಂತೆ ಮಾಡಿದಳು. ರಾಜನ ಸಮೀಪವಾಗುವ ಎಲ್ಲಾ ಸಂಧರ್ಭಗಳನ್ನು ಬಿಗಿದಪ್ಪಿದಳು. ತಾನು ಹಿಡಿದಿದ್ದ ಮಾರ್ಗ ತನ್ನನ್ನೇ ತಿನ್ನುತ್ತದೆಂದು ಆಕೆಗೆ ತಿಳಿದಿರಲಿಲ್ಲ. ಸೇಡೊಂದನ್ನು ಬಿಟ್ಟರೆ ಇನಾಯ ಕೆಟ್ಟವಳೀನಲ್ಲ. ಸಮಯ ಅವಳನ್ನು ವಿಷ ತುಂಬಿರುವ ಹಾವನ್ನಗಿ ಮಾಡಿತ್ತು. ದೇವಾಣಿಗಿಂತ ಎಲ್ಲದರಲ್ಲೂ ನಿಪುಣಳಾಗಿದ್ದ ಇನಾಯ, ತನಗೆ ಏನೂ ತಿಳಿದಿಲ್ಲವೆಂಬಂತೆ ನಟಿಸಿ ದೇವಾಣಿಯ ಬಳಿ ನೃತ್ಯ-ಸಂಗೀತ ಕಳಿಸುವಂತೆ ಮಾಡಿದಳು. ತಾನು ದೇವಯಾನಿಯ ಬಳಿ ಕಲಿಟ್ಟಿದ್ದ ನೃತ್ಯವನ್ನು ಪ್ರದರ್ಶಿಸಬೇಕೆಂದು ಆಸ್ಥಾನದಲ್ಲಿ ನರ್ತಕಿಯಾಗಿ ನರ್ತಿಸಿದಮೇಲೆ ಆಕೆಯನ್ನು ಕಂಡ ಜನರು ಬೆರಗಾದರು. ಅವಳ ವೈಯ್ಯಾರವನ್ನು ಕಂಡ ರಾಜನೇ ಮೂಖನಾದನು. ತನ್ನ ಉಂಗುರವನ್ನು ಇನಾಯಲಿಗೆ ನೀಡಿದನು. ಇದೊಂದರಲ್ಲೇ ರಾಜನು ಇನಾಯಳ ಕೈವಶನಾದನು.


ದೇವಾಣಿಗೆ ಸೂಕ್ಷ್ಮಣತೆ ತಿಳಿದು ರಾಜನ ಬಳಿ ಮಾತನಾಡಿದಳು. ಆದರೆ ರಾಜ ಇನಾಯಳನ್ನು ಹೊಗಳಿದನು. ದೇವಾಣಿಗೆ ರಾಜ ಇನಾಯಳ ವಶನಾದನು ಎಂದು ತಿಳಿಯಿತು. ಇನಾಯಳ ಮೇಲೆ ರಾಜನಿಗೆ ಪ್ರೀತಿ ಹುಟ್ಟುತ್ತಿದೆ ಎಂದು ರಾಜ ಅರಿತರೂ, ತನ್ನ ಹೃದಯ ದೇವಾಣಿಗೆ ಮಾತ್ರ ಸೀಮಿತ ಎಂದು ನಂಬಿದ್ದನು.


ಒಮ್ಮೆ ರಾಜನ ಬಳಿ ಇನಾಯ, "ದೇವಾಣಿಯೊಡನೆ ನೀವು ಮುಂಚಿನಂತಿಲ್ಲ, ಒಂದು ಹೆಣ್ಣಾಗಿ ಈ ಮಾತನ್ನು ಹೇಳುತ್ತೇನೆ ತಪ್ಪು ತಿಳಿಯದಿರಿ. ದುಂಬಿಗೆ ಒಂದು ಹೂವಿನಲ್ಲಿ ಮಕರಂದ ಸಿಗದಿದ್ದರೆ ಅದು ಬೇರೆ ಹೂವಿನೆಡೆಗೆ ಹೋಗುತ್ತದೆ. ಆ ದುಂಬಿಯಾರೆಂದು ನಿಮಗೆ ಗೊತ್ತು, ಮತ್ತೊಂದು ಹೂವಿನ ಬಳಿ ಇರುವುದನ್ನು ನಾನು ನೋಡಿದ್ದೇನೆ. ದಯವಿಟ್ಟು ದುಂಬಿಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ" ಎಂದೇಳಿ ಹೊರಟಳು. ರಾಜನಿಗೆ ಇದು ಸುಳ್ಳು ಎಂದು ತಿಳಿದಿದ್ದರೂ ಇನಾಯಳ ಕಂಗಳು, ಆಕೆಯ ವೈಯ್ಯಾರ ನಂಬುವಂತೆ ಮಾಡಿತು.


ರಾಜ ಮತ್ತು ದೇವಾಣಿಯ ಮದ್ಯೆ ಬಿರುಕು ಹುಟ್ಟಿತ್ತು. ದೇವಾಣಿಯನ್ನು ರಾಜ ದೂರ ತಳ್ಳುತ್ತಾ ಬಂದ. ದೇವಾಣಿಯು ತಾನು ತಪ್ಪು ಮಾಡಿಲ್ಲವೆಂದರೂ ರಾಜನು ಕೇಳದೆ ಇನಾಯಳನ್ನು ಮದುವೆಯಾಗಿಯೇಬಿಟ್ಟ! ದೇವಾಣಿಯು ದುಃಖತಾಳದೆ ಸಾಯಲು ನದಿಯ ಬಳಿ ಬಂದಳು. ಆಗ ತಾನು ಗರ್ಭವತಿಯೆಂದು ತಿಳಿದು ಅರಮನೆಗೆ ಬಂದಳು. ತಾನು ಇನ್ನೂ ರಾಜನ ಹೆಂಡತಿ, ತನ್ನ ಕರ್ತವ್ಯ ಹಲವಾರಿವೆ, ತಾನು ತಪ್ಪುಮಾಡಿಲ್ಲ ಎಂದು ಕಣ್ಒರೆಸಿಕೊಂಡಳು. 

ರಾಜನು ಇನಾಯಳನ್ನು ಮದುವೆಯಾದದ್ದು ಇನಾಯಳ ಮೇಲಿನ ಪ್ರೀತಿಗಲ್ಲ. ಅವನಿಗೆ ದೇವಾಣಿಯ ಮೇಲಷ್ಟೇ ಪ್ರೀತಿಯಿತ್ತು. ಒಂದೇ ಅರಮನೆಯಲ್ಲಿದ್ದೂ ದೇವಾಣಿಯನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಮನಸ್ಸಿನೊಡತಿ ಗರ್ಭವತಿಯೆಂದೂ ಅವನಿಗೆ ತಿಳಿದಿರಲಿಲ್ಲ.


ಇನಾಯ ದ್ವೇಷದ ಹೆಸರಿನಲ್ಲಿ ರಾಜನನ್ನು ತನಗೆ ತಿಳಿಯದಂತೆಯೇ ಪ್ರೀತಿಸುತ್ತಿದ್ದಳು. ಆಕೆಗೆ ರಾಜನ ಮೇಲೆ ಪ್ರೇಮ ದಿನೇ ದಿನೇ ಹೆಚ್ಚಾಗುತಿತ್ತು.


ಹೇಗೋ ದೇವಾಣಿ ಗರ್ಭಿಣಿಯೆಂದು ತಿಳಿದ ಇನಾಯ ದೇವಾಣಿಗೆ ವಿಷಾದ ಆಹಾರ ನೀಡಿದಳು!


ಪ್ರಳಯವಾಗುತ್ತದೆ ಎಂಬಂತೆ ಜೋರಾಗಿ ಗಾಳಿ ಬೀಸಿ ಮಳೆ ಬರುತಿತ್ತು. ರಾಜನಿಗೆ ಏನೋ ಸಂಕಟ. ಇನಾಯಳೊಟ್ಟಿಗೆ ಸಮಯ ಕಳೆಯುತ್ತಿದ್ದ ರಾಜನಿಗೆ ತನ್ನ ಜೀವದೊಡತಿಯ ಜೀವ ಸಂಕಟವ ತಿಳಿಯಿತು, ಅದೇ ಸಮಯದಲ್ಲಿ ಒಬ್ಬ ಸೈನಿಕ ಬಂದು ರಾಜನಿಗೆ, "ರಾಣಿಯವರು ಯಾವುದೂ ತೊಂದರೆಯಿಂದ ಬಳಲುತ್ತಿದ್ದರೆ ದಯವಿಟ್ಟೂ ಬನ್ನಿ" ಎಂದಾಗ ರಾಜ ಒಂದೇ ಉಸಿರಿನಲ್ಲಿ ಹೋಗಿ ತನ್ನ ಮಡದಿ ಬಳಲುತ್ತಿರುವುದನ್ನು ಕಂಡು ಗಾಬರಿಯಾದ, ಅವಳ ನೋವನ್ನು ತನಗೆ ಕೊಡೆಂದು ದೇವರಲ್ಲಿ ಬೇಡಿದ. ದೇವಾಣಿಯು ನೋವಿನಲ್ಲೇ ತನ್ನ ಪಾಲಿಗೆ ದೇವರಾಗಿದ್ದ ರಾಜನಿಗೆ, ಅವನು ತಂದೆಯಾಗಬಹುದಾಗಿತ್ತು ಆದರೆ ತನ್ನನ್ನು, ಮಗುವನ್ನು ಇನಾಯ ಕೊಂದಳು ಎಂದು ಹೇಳಿ ಕೊನೆ ಉಸಿರೆಳೆದಳು ರಾಜನು ಹುಚ್ಚನಾದ, ದೇವಾಣಿಯನ್ನು ತಬ್ಬಿ ಹಿಡಿದ, ಗುಡುಗು-ಸಿಡಿಲು ಹೆದರುವಂತೆ ಜೋರಾಗಿ ಅತ್ತ. 

ಪ್ರಯೋಜನವೇನು? ತನ್ನ ಜೀವದೊಡತಿಯ ಪ್ರಾಣದೀಪ ಆರಿಹೋಗಿತ್ತು. ತಾನು ಮಾಡಿದ್ದು ತಪ್ಪು ಎಂದು ಅಳುತ್ತ ಕೂತ. ಇನಾಯ ತಾನು ರಾಜನ ಮೇಲಿಟ್ಟಿದ್ದ ಪ್ರೀತಿಯು ಹೀಗಾಡಿಸಿತು, ತನ್ನನ್ನು ಕ್ಷಮಿಸಿಯೆಂದು ಅಳಲು ಆರಂಭಿಸಿದಳು. ರಾಜನು ಅವಳನ್ನು ಗಟ್ಟಿಯಾಗಿ ಹಿಡಿದು ಕೆಂಗಣ್ಣಿನಿಂದ ನೋಡಿ, ತನ್ನ ಕತ್ತಿಯಿಂದ ಇನಾಯಳನ್ನು ಕೊಳ್ಳಬೇಕೆಂದು ಕಿರುಚಿ ತನ್ನ ಕತ್ತಿಯನ್ನು ಎತ್ತಿದ. ರಾಜನಿಗೆ ತನ್ನ ಮೇಲೆ ಪ್ರೀತಿಯೇ ಇಲ್ಲ, ದ್ವೇಷವನ್ನು ಬಿಟ್ಟು ಅವನನ್ನು ಪ್ರೀತಿಸುತ್ತಿರುವ ತನ್ನನ್ನೇ ಕೊಳ್ಳಲು ನೋಡುತ್ತಿದ್ದಾನೆ ಎಂದು ಕೋಪದಿಂದ ತನ್ನ ಕತ್ತಿಯಿಂದ ರಾಜನನ್ನು ಕೊಲ್ಲಲು ನೋಡಿದಳು. ಅಷ್ಟರೊಟ್ಟಿಗೆ ರಾಜ ಅವಳ ಹೊಟ್ಟೆಗೆ ಕತ್ತಿಹಾಕಿದ್ದ. ಆ ನೋವಿನಲ್ಲೂ ಸಹ ಇನಾಯ ಅವನ ಕುತ್ತಿಗೆಗೆ ಕತ್ತಿ ಹಾಕಿ ತಾನು ಸತ್ತಳು.


ಅತ್ತ ದೇವಾಣಿ ಕೀವಲ ಹೆಣವಾಗಿ ಬಿದ್ದಿದ್ದರೆ, ಇತ್ತ ರಾಜ ಅವಳೊಟ್ಟಿಗೆ ಕಳೆದ ಸವಿನೆನೆಪುಗಳನ್ನು ನೆನೆಯುತ್ತಾ ಶಾಶ್ವತವಾಗಿ ಕಣ್ಮುಚ್ಚಿದ.


ನೋವಿನಲ್ಲಿ ನಲಿವಿನಲ್ಲಿ ಒಂದಾದವರು ಸಾವಿನಲ್ಲೂ ಒಂದಾದರು.


ಸಂಬಂಧಗಳು ಪವಿತ್ರವಾದವು, ಸರಸ-ವಿರಸವೆಂಬ ಸಮರಸಗಳಿಂದಲೇ ಸುಂದರವಾಗಿವೆ. ಒಂದೆರೆಡು ದಿನದ ಈ ಜೀವನದಲ್ಲಿ ದ್ವೇಷ, ಅಸೂಯೆ, ಮೋಸ, ವಂಚನೆಗಳೆಲ್ಲವನ್ನು ಬಿಟ್ಟು ಪ್ರೀತಿಸೋಣ. ಪ್ರೀತಿಯೊಂದನ್ನೇ ಗೆಲ್ಲಿಸೋಣ!      

   


Rate this content
Log in

Similar kannada story from Tragedy