ನನ್ನ ಅಮ್ಮ
ನನ್ನ ಅಮ್ಮ
ಬದುಕು ನೀಡಿದವಳು.
ನಾ ಭೂಮಿಗೆ ಬರಲು ಜೀವ ದಾನ
ಮಾಡಿದವಳು.
ನನ್ನನು ಪ್ರಪಂಚಕ್ಕೆ ಪರಿಚಯಿಸಿದವಳು.
ನನ್ನ ಆಗಮನದಿ ತಾನು ಮರು ಹುಟ್ಟು ಪಡೆದೆದವಳು.
ತನ್ನೊಳಗೆ ನನ್ನ ಅಡಗಿಸಿ ಸುರಕ್ಷಿಸುವವಳು.
ನನ್ನ ಪ್ರತಿ ಮೊದಲುಗಳ ಮೊದಲು ಅವಳು.
ನನ್ನ ಪ್ರತಿ ಹೆಜ್ಜೆಗು ತನ್ನ ಹೆಜ್ಜೆ ಸೇರಿಸಿ ಸದಾ ನಡೆಸುವವಳು.
ತನ್ನ ಅಂಗೈಲಿಟ್ಟುಕೊಂಡು ನನ್ನ ಹೊಸ ಬದುಕಿಗೆ ಅಡಿಪಾಯ ಹಾಕಿದವಳು.
ನನ್ನ ಬದುಕಿಗೆ ಸಾವಿರ ಬಣ್ಣ ತುಂಬಿದವಳು.
ನನ್ನ ಬದುಕನೇ ಅವಳ ಬದುಕಾಗಿಸಿಕೊಂಡವಳು.
ನನ್ನ ಜೀವನ ಪಾಠದ ಗುರು ಅವಳು.
ನನ್ನ ಪ್ರತಿ ಪ್ರಶ್ನೆಗಳ ಉತ್ತರ ಅವಳು.
ನನ್ನ ತಪ್ಪುಗಳ ತಿದ್ದಿ ಬುದ್ಧಿ ಹೇಳಿದವಳು.
ನಾ ಬಿದ್ದಾಗ ಮೇಲೆ ಎತ್ತಿದವಳು.
ನನ್ನ ಬದುಕಿನಲಿ ಕನ
ಸು ಬಿತ್ತಿದವಳು.
ನನ್ನ ಕನಸೆ ಅವಳ ಕನಸು ಎಂದವಳು
ನನ್ನ ಬದುಕನ್ನೆ ಅವಳ ಬದುಕಿನ ಗುರಿಯಾಗಿಸಿದವಳು.
ನನ್ನ ಸಾವಿರ ಗುಟ್ಟು ಕೇಳುವ ಸ್ನೇಹಿತೆಯಾದವಳು.
ನನ್ನ ಕೂಡಿ ಜಗಳವಾಡುವಾಗ ಸೋದರಿಯಾದವಳು.
ತನ್ನ ಕಷ್ಟಗಳ ಮರೆತು ನನಗೆ ಬರೀ ಖುಷಿ ತುಂಬಿದವಳು.
ಸಾವಿರ ಕಷ್ಟ, ನೋವುಗಳ ಎದುರಿಸಿ ನಿಲ್ಲುವ ಧೈರ್ಯ ತುಂಬಿದವಳು.
ಮಾನವತೆಯ ನಿಜವಾದ ಅರ್ಥ ತಿಳಿಸಿದವಳು.
ಬದುಕಿನ ಮೂಲ ಪಾಠಗಳ ಅರ್ಥ ತಿಳಿಸಿದವಳು.
ಅಮ್ಮ ಎನ್ನುವ ಪದದ ನಿಜ ಅರ್ಥ ಅವಳು.
ವರ್ಣಿಸಲು ಪದಗಳೇ ಸಿಗದವಳು
ಎರಡು ಅಕ್ಷರದ ಜೀವ ಬಿಂದು ಅವಳು.
ದೇವರುಗಳ ದೇವರೇ ಅವಳು.
ಅವಳೇ ನನ್ನ ದೇವರು, ನನ್ನ ಅಮ್ಮ.
ಪದಗಳಿಗು ಮೀರಿದವಳು ನನ್ನ ಅಮ್ಮ.
ನನ್ನ ಪ್ರೀತಿಯ ಅಮ್ಮ.