"ದ್ರೋಣಾಚಾರ್ಯರಾಗಿ ನನ್ನ ಗುರು"
"ದ್ರೋಣಾಚಾರ್ಯರಾಗಿ ನನ್ನ ಗುರು"


ನನ್ನ ಗುರುಗಳು ಸಹನಾ,ಸರಳ,ಸಜ್ಜನಿಕೆಯ ವ್ಯಕ್ತಿತ್ವ ಕ್ಕೆ ಹೆಸರಾದವರು..ಇವರ ವ್ಯಕ್ತಿತ್ವ ನಾನು ಬಿ.ಇಡಿ ವ್ಯಾಸಂಗ ಮಾಡುವಾಗ ನನಗೆ ಪರಿಚಯವಾಯಿತು. ಅಂದಿನಿಂದ ಇವರನ್ನು ಅನುಸರಿಸುತ್ತಾ ಬಂದೆ ಆದರೆ ಅವರ ಬಳಿ ಹೋಗಿ ಹೇಳಲು ಸಂಕೋಚ, ಗೌರವ ಭಾವನೆ ಅಡ್ಡಿ ಬರುತ್ತಿತ್ತು.ಆಗ ನನಗೆ ನೆನಪಾಗುತ್ತಿದ್ದದ್ದು ದ್ರೋಣಾಚಾರ್ಯ ಹಾಗೂ ಏಕಲವ್ಯ ರ ಸಂಬಂಧ.ಅವರು ಹೇಳುತ್ತಿದ್ದ ಪ್ರತೀ ಕಲಿಕಾ ಚಟುವಟಿಕೆ ಗಳನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಗಳಿಂದ ಮಾಡುತ್ತಾ ಹೋದೆ.ಅದು ನನ್ನನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಟಾಪರ್ ಆಗಲು ಸಹಾಯವಾಯಿತು.ಅವರು ಮಕ್ಕಳಿಗೆ ಕೊಡುತ್ತಿದ್ದ ಪ್ರಾಮುಖ್ಯತೆ, ಪ್ರೀತಿ,ಸಲಹೆ,ಸರಳ ಸಜ್ಜನಿಕೆಯ ವ್ಯಕ್ತಿತ್ವ,ವಿಷಯದ ಆಳ ಜ್ಞಾನ,ಮಕ್ಕಳನ್ನು ಸ್ನೇಹಿತರಂತೆ ಸಲಹೆ ಸೂಚನೆ ನೀಡುವುದು,ಕರ್ತವ್ಯ ನಿಷ್ಠೆ,ಸಮಯ ಪ್ರಜ್ಞೆ ಎಲ್ಲವೂ ಅವರಿಗೆ ಭೂಷಣವಾಗಿದ್ದವು. ಒಟ್ಟಾರೆ ಅವರ ಇಂಥ ಕೆಲವನ್ನು ನನ್ನ ಶಿಕ್ಷಣ ವೃತ್ತಿಯಲ್ಲಿ ಅನುಸರಿಸುತ್ತಾ ಬಂದೆ ಅದು ನನಗೆ ತುಂಬಾ ತುಂಬಾ ಸಹಾಯವಾಯಿತು.ಅದು ನನಗೆ ಮಕ್ಕಳ ಅಗಾಧ ಪ್ರೀತಿಯನ್ನು ತಂದು ಕೊಟ್ಟಿತು.ಇಂದೂ ನನಗೆ ನನ್ನ ವಿದ್ಯಾರ್ಥಿಗಳೇ ನನ್ನ ಸ್ನೇಹಿತರು..ಈಗೆ ನನ್ನ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸಿಕೊಳ್ಳಲು ಅನುವುಮಾಡಿಕೊಟ್ಟ ನನ್ನ ತಂದೆ ವಿರೂಪಾಕ್ಷಪ್ಪ ಟಿ.ವಿ ಇವರಿಗೂ..ಹಾಗೂ ನನ್ನ ನೆಚ್ಚಿನ ಗುರುವಾದ ಬಸಪ್ಪ.ಟಿ ಇವರಿಗೂ ನನ್ನ ಅನಂತ ಅನಂತ ಪ್ರಣಾಮಗಳು