ಬಂಜೆ
ಬಂಜೆ
ಹಿಂದೆ ಯಾರೋ ಒಬ್ಬಾತ, ಸಕಲವೂ ನೀನೆ ಎಂದು ನಂಬಿ ಬಂದಿರುವ ತನ್ನರ್ಧಾಂಗಿಯು ಬಂಜೆ ಎಂದು ಇನ್ನೊಂದು ವಿವಾಹವಾದನು,ಇದೇ ಕಾರಣಕ್ಕಾಗಿ ಮತ್ತೊಂದು ವಿವಾಹವಾದನು..ಹೀಗೆ ಮುಂದುವರೆಯಿತು ವಿವಾಹದ ಸಾಲು..ಈ ಎಲ್ಲಾ ಹೆಣ್ಣಿನ ಬಾಳಿನ ಬೆಳಕು ಮಂಕಾಯಿತು..
ಕೊನೆಗೆ ತಿಳಿಯಿತು ಬಂಜೆತನಕ್ಕೆ ಕಾರಣವಿದ್ದದ್ದು ಗಂಡಿನಲ್ಲಿಯೇ ಹೊರತು ತಾನು ಕೈ ಹಿಡಿದ ಯಾವ ಸ್ತ್ರೀಯರಲ್ಲಿ ಅಲ್ಲವೆಂದು.. ಯಾವುದೇ ಸಮಸ್ಯೆಗೆ ಪರಿಹಾರ ಸಿಗಲು ಮೊದಲು ಮೂಲ ಕಾರಣ ತಿಳಿಯುವುದು ಉತ್ತಮ..
ಕಾರಣ ತಿಳಿಯದೆ ವ್ಯರ್ಥ ಪ್ರಯತ್ನವ ಮಾಡದಿರಿ.
ಹೆಣ್ಣನ್ನೇ ಸದಾ ಬಂಜೆ ಎಂದು ಜರಿಯದಿರಿ.
ಸಂಸಾರದ ನೋವಿನಲ್ಲೂ ಗಂಡು ಹೆಣ್ಣಿಗೆ ಸಮಾನತೆ ಇದೆ.
ಬಂಜೆ ಎಂದ ಮಾತ್ರಕ್ಕೆ ಹೆಣ್ಣಲ್ಲಿ ತಾಯಿ ಹೃದಯ ಇಲ್ಲವೆಂದೇನಿಲ್ಲ. ಬಂಜೆ ಪಡುವ ನೋವಿನ ಸಂಗತಿಗಳು ಸಾವಿರಾರು.. ಹೀಯಾಳಿಕೆಯ ಮಾತುಗಳು ನೂರಾರು. ಬದುಕೇ ಬೇಡವೆನಿಸುವ ಜನರ ಕೊಂಕು ಮಾತುಗಳು.
ಬಂಜೆತನಕ್ಕೆ ಮರುಮದುವೆಯೆ ಸೂಕ್ತ ಪರಿಹಾರವಲ್ಲ.
ಇಂದಿನ ವೈಜ್ಞಾನಿಕ ಫಲದಿಂದ ಹಲವಾರು ಔಷಧಿಗಳ ಸಹಕಾರದಿಂದ ತಾಯಿಯಾಗುವ ಎಲ್ಲಾ ಕದಗಳು ತೆರೆಯುತ್ತವೆ. ಪ್ರಯತ್ನ ಬೇಕು. ತಾಳ್ಮೆ ಬೇಕು. ತಾಳ್ಮೆ ಇದ್ದರೆ ಸಕಲವೂ ಸಿದ್ಧಿಸಿವುದು. ಧೃತಿಗೆಡದೆ ಮುನ್ನುಗ್ಗಬೇಕು.