Kavya Poojary

Inspirational

2  

Kavya Poojary

Inspirational

ಅಪ್ಪಾ ಮತ್ತು ಕನಸು

ಅಪ್ಪಾ ಮತ್ತು ಕನಸು

2 mins
192


ಬದುಕಿನ ದಾರಿಯ ಬಗೆಗೆ ಸಾವಿರ ಕನಸುಗಳ ಹೊತ್ತು ನಡೆಯುತ್ತಿರುವವಳೇ ನಮ್ಮ ಕಥಾನಾಯಕಿ ಕನಸು.ಮಾತಿನ ಮಲ್ಲಿ ಕನಸು ಎಲ್ಲರಿಗೂ ಅಚ್ಚುಮೆಚ್ಚು.


ಇಂದು -ನಾಳೆಗಳ ನಡುವೆ ಪುಟ್ಟ ಕನಸೊಂದನ್ನು ನನಸಾಗಿಸಲೇ ಬೇಕೆನುವ ಮನಸು ಈಕೆಗೆ. ಮುಖದಲ್ಲಿ ನಗು , ಮಾತಿನಲ್ಲಿ ಆತ್ಮೀಯತೆ ಎಲ್ಲರನ್ನು ಅಕರ್ಷಿಸುವ ಗುಣ ಈಕೆಯದು. ಅಂದಹಾಗೆ ಕನಸು ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ತಂದೆ ತಾಯಿಗೆ ಮಗಳೇ ಪ್ರಪಂಚ.


ಕನಸು ಎಲ್ಲಾ ವಿಚಾರದಲ್ಲೂ ಬುದ್ಧಿವಂತೆ . ಆದರೆ ಸ್ವಲ್ಪ ಮುಂಗೋಪಿ . ಆ ಕ್ಷಣಕ್ಕೆ ಸಿಟ್ಟಿನಲ್ಲಿ ಏನೂ ಬೇಕಾದರೂ ಮಾಡುವಂತ ಸಿಡುಕಿ . ಬಡತನದ ಬೆಂಕಿಯಲ್ಲಿ ಅರಳಿರುವ ಈ ಮುದ್ದು ಕನಸಿಗೆ ಶಾಲೆ ಅಂದ್ರೇ ಅಚ್ಚುಮೆಚ್ಚು .ಆದರೆ ಬಡತನದ ಶಾಪವೋ ಏನೊ ಅಂದೊಂದು ದಿನ ಅಪ್ಪ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು "ಮಗಳೇ ದಿನಾ ಸಿಗುವ ನನ್ನ ಸಂಬಳ ಮೂರು ಹೊತ್ತಿನ ಊಟಕ್ಕೇ ಸಾಲುದಿಲ್ಲ ಅದೂ ಅಲ್ಲದೇ ನಿನ್ನ ಶಾಲೆ ಖರ್ಚನ್ನು ತುಂಬಲು ಈಗ ನನ್ನಿಂದ ಸಾಧ್ಯವೇ ಇಲ್ಲಾ... " ಅಪ್ಪನ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದ ಕನಸು ಕೋಣೆಯ ಬಾಗಿಲನ್ನು ಧಪ್ ಎಂದು ಮುಚ್ಚಿಕೊಂಡು ಬಿಡುತ್ತಾಳೆ ...ತಂದೆ ಅದೆಷ್ಟು ಬಾರಿ ಕರೆದರೂ ಕನಸು ಉತ್ತರಿಸುವುದಿಲ್ಲ....


ಮರುದಿನ ಬೆಳ್ಳಂಬೆಳಗ್ಗೆ ಅಮ್ಮ ಕನಸು....ಕನಸೂ....ಎಂದು ಕೂಗಿದರೂ ಕನಸು ಮಾತನಾಡುವುದಿಲ್ಲ.... ಈ ಹುಡುಗಿಗೆ ಅದೆಂಥಾ ಸಿಟ್ಟು ಎನ್ನುತ್ತಾ ಅಮ್ಮ..ಕೋಣೆಯ ಬಾಗಿಲನ್ನು ತಟ್ಟಿ ಒಳಗೆ ಹೋಗಿ ನೋಡಿದರೆ ಅಲ್ಲಿ ಕನಸಿನ ಬದಲಾಗಿ ಚೀಟಿಯೊಂದು ಬಿದ್ದಿತ್ತು....


ಅದರಲ್ಲಿ ಹೀಗೆ ಪ್ರೀತಿಯ ಅಪ್ಪ ಅಮ್ಮನಿಗೆ ಎಂದು ಬರೆದಿತ್ತು


"ಅಪ್ಪಾ ಅಮ್ಮಾ ಹೀಗೊಂದು ದಿನ ಬರಬಹುದು ಎನುವ ಊಹೆಯೂ ನನಗಿರಲಿಲ್ಲ ..ನಿಮ್ಮ ಬದುಕಿನಿಂದ ನಾನು ಹೊರನಡೆದು ಹೋಗುತ್ತಿದ್ದೆನೆ..ದಯವಿಟ್ಟು ನನ್ನನ್ನು ಕ್ಷಮಿಸಿ....?"


ಮುಂದೆ ಕನಸು ಏನು ಬರೆದಿದ್ದಾಳೆ ಎನ್ನುವುದನ್ನು ಓದದೆ ತಾಯಿ ಬೊಬ್ಬಿಡುತ್ತಾಳೆ.....

ಆದರೆ ತಂದೆ ಆಪತ್ರವನ್ನು ನಡುಗುವ ಕೈಯಿಂದ ತೆಗೆದು ಓದಲು ಮುಂದಾಗುತ್ತಾನೆ ಆ ಪತ್ರದಲ್ಲಿ ಮುಂದೆ ಹೀಗೆ ಬರೆದಿರುತ್ತದೆ.


"ಅಪ್ಪಾ ..ಹೀಗಿಲ್ಲಾ ಬರೆದು ನಾನು ಮನೆಬಿಟ್ಟು ಹೋಗುವೆ ಎಂದು ಅಂದುಕೊಂಡೆಯ ಅಯ್ಯೋ ನನ್ನಾ ಮುದ್ದು ಅಪ್ಪಾ  ನನ್ನಾ ಪೆದ್ದು ಅಮ್ಮಾ ನಾನು ಮನೆಬಿಟ್ಟು ಹೋಗ್ತಯಿಲ್ಲಾ ನಮ್ಮ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿಗಾಗಿ ಪ್ರತೀ ವರ್ಷ ಸಿಗೋ ಉಚಿತ ಶಿಕ್ಷಣ ದ ಪರೀಕ್ಷೆ ಬರೀಲಿಕ್ಕೆ ನಿಶ್ಚಯಿಸಿದ್ದೇನೆ.  ಇಷ್ಟರಲ್ಲೇ ಸಿಹಿ ಸುದ್ದಿ ಬರುತ್ತೆ.


ಅಪ್ಪಾ ಇನ್ನೊಂದು ವಿಚಾರ ನಿನ್ನೆ ನೀನು ಸೇಟು ಹತ್ರ ನನ್ನ ಓದಿದಾಗಿ ಮನೆ ಅಡವಿಗಿಡೋ ವಿಚಾರ ಮಾತಾಡೊದನ್ನ ನಾನು ಕೇಳಿಸಿಕೊಂಡಿದ್ದೆ ರಾತ್ರಿ ನಿನ್ನ ಮಾತನ್ನ ಅರ್ಧಕ್ಕೆ ನಿಲ್ಲಿಸಿದ್ದು ಸಿಟ್ಟಿಂದ ಅಲ್ಲಾ ದುಃಖದಿಂದ...ನನ್ನ ಓದಿಗಾಗಿ ನೀವು ಮನೆ ಪತ್ರ ಅಡಾಇಡೋ ಅಗತ್ಯ ಇಲ್ಲಾ... ಯಾಕಂದ್ರೇ.... ಯಾಕಂದ್ರೇ....ನಾನು ಎಲ್ಲಿ ತನ್ಕ ಓದ್ತೇನೋ ಅಲ್ಲಿ ತನ್ಕ ಓದ್ಸೋ ಜವಬ್ದಾರಿನ ನಮ್ ಊರಿನ ಪಂಚಾಯಿತಿ ತೆಗೊಂಡಿದೆ....ಇನ್ನೊಂದು ವಿಚಾರ ಅಪ್ಪಾ ಕಣ್ಣೀರ್ ಹಾಕಿ ಚೀಟಿ ಒದ್ದೆ ಮಾಡಿ ಬಿಡ್ಬೇಡ ಮತ್ತೇನಂದ್ರೆ ಇಲ್ಲಿ ಮಂಚದ್ ಕೆಳಗೆ ಕೂತು ಕೂತು ಬೆನ್ನು ನೋವಾಗ್ತಿದೆ ಅಪ್ಪಾ ..."


ಎಂದು ಬರೆದಿದ್ದ ಮುದ್ದು ಕನಸು ಮಂಚದ ಕೆಳಗೆ ಅಡಗಿ ಕೂತಿರುವ ವಿಚಾರ ಗೊತ್ತಾದ ಕೂಡಲೆ ಮಗಳನ್ನು ಎತ್ತಿ ಅಪ್ಪಾ ಬಾಚಿತಬ್ಬಿ ಹೆಂಡತಿಯನ್ನು ಕರೆದು ಏನಾದರು ಸಿಹಿ ಮಾಡು ಎಂದು ತಾನು ಕನಸುವಿನ ಕನಸಿಗೆ ರೆಕ್ಕೆ ಜೋಡಿಸುವ ಕೆಲಸದಲ್ಲಿ ಮಗ್ನನಾಗುತ್ತಾನೆ.....!!


Rate this content
Log in

Similar kannada story from Inspirational