Kavya Poojary

Children Stories

1  

Kavya Poojary

Children Stories

ಮಮತೆ

ಮಮತೆ

1 min
149


ಕನಸು- ಅಯ್ಯೋ ಅಪ್ಪಾ....ದಿನಾಲೂ ನೀನು ಒಂದೇ 

ರೀತಿ ಜಡೆ ಕಡ್ತೀಯಾ .

ಅಪ್ಪಾ- ನನ್ನ ಮುದ್ದು ಕನಸು ನಿಂಗೆ ಹೀಗೆ ಜಡೆ ಕಟ್ಟಿದ್ರೆ

 ತುಂಬಾ ಚೆನ್ನಾಗಿ ಕಾಣಿಸುತ್ತೆ.

ಕನಸು- ಎಲ್ಲಾ ಬರೀ ಸುಳ್ಳು. ನಿಂಗೇ ಇದ್ ಒಂದೇ ಸರಿಯಾಗಿ ಬರೋದು

ಅಪ್ಪಾ-ನನ್ನ ಚಿನ್ನಾರಿ ಈಗ ದೊಡ್ಡವಳಾಗಿದ್ದಾಳೆ.ಅವಳಿಗೆ ಈಗ ಎಲ್ಲಾ ಗೊತ್ತಾಗತ್ತೆ.

ಕನಸು-ಅಲ್ವಾ ಮತ್ತೇ... 

ಅಪ್ಪಾ-ಸರೀ ಹಾಗಿದ್ರೆ. ಇವತ್ತು ನಾನು ನಿಂಗೆ ರಿಬ್ಬನ್ ಹಾಕಿ ಜಡೇ ಕಟ್ತೀನಿ ಮಗಳೇ

ಕನಸು-ಹೌದಾ ಅಪ್ಪಾ..ಸರೀ ಬೇಗ ಕಟ್ಟು

ಅಪ್ಪಾ-ಇರೂ ಮಗಳೇ..

ಕನಸು-ಅಪ್ಪಾ....ಬೇಗ...ಅಪ್ಪಾ...... 

ಅಮ್ಮಾ ಇದ್ದಿದ್ರೆ..ನಂಗೆ ಐದು ನಿಮಿಷದಲ್ಲಿ ಜಡೆ ಕಟ್ತಾ ಇದ್ಲೂ....

ಅಪ್ಪಾ-ಹೌದು ಕನಸು. ನಾನು ಇದ್ದು ಇಲ್ಲದಂತೆ. ಈ ದೇಹ ಇಟ್ಕೊಂಡು ನಿನ್ನನ್ನ ಸರಿಯಾಗಿ ನೋಡ್ಕೊಳೋಕೆ ಆಗಲ್ಲ. ನಿನ್ಗೆ ಸರಿಯಾದ ಅಪ್ಪಾ ಅಲ್ಲಾ ನಾನು.

ಆ ದೇವ್ರು ನಿನ್ನ ಅಮ್ಮನ್ನ ಕರ್ಕೊಳ್ಳೋ ಬದ್ಲು ನನ್ನನ್ನ ...

ಕನಸು- ಅಯ್ಯೋ ಅಪ್ಪಾ ನಿಲ್ಸು...ಇನ್ನು ಒಂದು ಮಾತಾಡ್ಬಾರ್ದು....ಇಷ್ಟು ದಿನ ನೀನು ಹೇಗೆ ಕೂದ್ಲು ಕಟ್ತಾ ಇದ್ಯೋ ಹಾಗೆ ಕಟ್ಟು . ನಂಗೇ ಅದೇ ಇಷ್ಟಾ...ನಿಂಗೆ ಇನ್ನೊಂದು ವಿಷ್ಯಾ ಗೊತ್ತಾ? ಶಾಲೆ ಯಲ್ಲಿ ಎಲ್ರೂ ಹೇಳ್ತಾರೆ ನನ್ನಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ ಅಂತ ಯಾಕಂದ್ರೆ ದೇವ್ರೇ ನನ್ನ ಜೊತೆ ಇದ್ದಾನೆ ಅಂತ. ಆ ದೇವ್ರು ಯಾರ್ ಗೊತ್ತಾ ...ನನ್ನಾ ಮುದ್ದು ಅಪ್ಪಾ.............ದಡೂತಿ ಅಪ್ಪಾ.........!

ಅಪ್ಪಾ-ಕನಸೂ...I love you ಮುದ್ದೂ.....

ಕನಸು-ಅಪ್ಪಾ..ನೀನು ಜಡೆ ಕಟ್ತಾ ಇರೂ ನಾನೂ ನಿಂಗೋಸ್ಕರ ಡಾನ್ಸ್ ಮಾಡ್ತೆನೆ

ನೋಡು.......ಅಪ್ಪಾ ..ಅಪ್ಪಾ.....ನಂಗೆ ನೀನೇ...ಸಾಕಪ್ಪ......!


Rate this content
Log in