ಸ್ನೇಹದ ಬೆಸುಗೆ
ಸ್ನೇಹದ ಬೆಸುಗೆ
ಸುಡುವ ಸೂರ್ಯನ ಕಿರಣಗಳಿಗೆ ಬಂಧ
ತಂಪಿನ ಶಶಿಗೆ ತಂಗಾಳಿಯೇ ಸಂಬಂಧ
ಸದಾ ಬೆರೆತಿಹುದು ಮಧುರವಾದ ಹಾಲು-ಜೇನು
ಹಾಗೆಯೇ ಸ್ನೇಹದ ಬೆಸುಗೆಯಲ್ಲಿ ನಾನು ನೀನು!!
ಅಲೆಗಳು ಸಾಗುವವು ಕಡಲಿನ ಕಡೆಗೆ
ನಿನ್ನ ಗೆಳೆತನ ಸಾಗುವುದು ನನ್ನ ಮನದೆಡೆಗೆ
ಬಾನಿನಂತೆ ಅಂತ್ಯವಿಲ್ಲದ ನಮ್ಮೀ ಸ್ನೇಹ
ನಮ್ಮಲ್ಲಿ ಎಂದೂ ಮೂಡಬಾರದು ಸಂದೇಹ!!
ನೆಲೆಸಿರುವೆವು ಭೂದೇವಿಯ ಮಡಿಲಲ್ಲಿ
ಹಲವಾರು ನದಿಗಳು ಹರಿಯುವವು ಇಲ್ಲಿ
ಅನೇಕ ಕವಿ ಸಾಹಿತಿಗಳು ತಂಗಿದ್ದರಿಲ್ಲಿ
ಬೇಧವಿಲ್ಲದೆ ನಾವಾಗೋಣ ಕಣ್ಮಣಿಗಳಿಲ್ಲಿ!!
ಕ್ಷಣಕ್ಷಣವು ಸ್ಥಾಪಿಸಿದೆವು ಸ್ನೇಹದ ಮಂದಿರ
ಸುಖ-ದುಃಖ ನೆನಪುಗಳೇ ಇದರ ಆಗರ
ನಮ್ಮಿಬ್ಬರ ಸ್ನೇಹದ ನಡುವೆ ಬಾರದಿರಲಿ ಅಂತರ
ಈ ಮೈತ್ರಿಯ ಪದಗಳಿಗೆ ನೀನೆ ಪ್ರೀತಿಯ ಇಂಚರ!!
