ಪ್ರೀತಿಯ ಬೆಸುಗೆ
ಪ್ರೀತಿಯ ಬೆಸುಗೆ
ನಾ ಎಲ್ಲಿದ್ದರೇನಂತೆ ನಿನ್ನ ಜೊತೆ ಹಾಯಾಗಿರುವೆ
ನಿನ್ನ ಒಂದು ಸ್ಪರ್ಶದಲಿ ನಾ ಖುಷಿಯ ಕಾಣುವೆ
ನನ್ನಮ್ಮ ಬಿಟ್ಟು ಹೋದರೂ ನೀ ಆಸರೆಯಾಗಿರುವೆ
ನೀ ಕಾಣದೇ ಹೋದರಂತೂ ನಾ ಅತ್ತು ಕರೆಯುವೆ
ಹಾಲು ಅನ್ನ ಕೊಟ್ಟು ನನಗೆ ಪ್ರೀತಿಯಿಂದ ಸಾಕಿದೆ
ತಾಯಿಯಿಲ್ಲದ ಕೊರತೆಯನ್ನು ನೀನಿಂದು ನೀಗಿದೆ
ನಿನ್ನ ಮನದ ಭಾವಗಳನ್ನು ನನ್ನ ಜೊತೆಗೆ ಹಂಚಿದೆ
ನಾ ನಿನಗೆ ನೀ ನನಗೆನ್ನುತಾ ನಮ್ಮೀ ಜೀವನ ಸಾಗಿದೆ
ಮೂಕ ಪ್ರಾಣಿಯು ನೀನು ಮಿಯಾವ್ ಎನ್ನುವೆ
ನಿನ್ನ ಒಂದು ಕರೆಯಲ್ಲಿ ಹಲವು ಭಾವಗಳು ಅಡಗಿವೆ
ನಿನ್ನ ಕರೆಯ ಕೇಳಿ ನಾ ಬರದಿರೆ ಅತ್ತು ರಂಪ ಮಾಡುವೆ
ಡಬ್ಬದಲ್ಲಿನ ಕುರುಕಲು ತಿಂಡಿಗಳ ಬೇಕು ಬೇಕು ಎನ್ನುವೆ
ಮನುಜನಲ್ಲದಿರೇನಂತೆ ನಿನಗೂ ಒಂದು ಮನಸ್ಸಿದೆ
ಆ ಪುಟ್ಟ ಮನದೊಳಗೆ ಅನೇಕ ನೋವು ಅಡಗಿದೆ
ನನ್ನ ಅಂಗೈಯಲ್ಲಿ ನಿನ್ನ ಕೈಯನಿಟ್ಟು ನಿರಾಳನಾಗುವೆ
ನನ್ನೊಳಗೆ ನಿನ್ನಮ್ಮನ ಕಂಡು ನೀ ಹರುಷ ಪಡುವೆ!!
