ನಕಲಿಸದಿರು
ನಕಲಿಸದಿರು
ಕಲಿ-ಕಲಿಸು
ನಕಲಿಸದಿರು ಮನವೇ l
ನಿನ್ನ ನೀ
ತಿಳಿದಷ್ಟೂ
ಯಾರೂ ತಿಳಿದಿರಲಾರರು ..ll
ಯಾರ ಇಷ್ಟಕೋ
ನಿನ್ನ ತನವ
ಬದಲಿಸದಿರು...l
ಜಗತ್ತೇ ಬದಲಾದರೂ..
ಅಕ್ಕ ಪಕ್ಕ ನೋಡಿದಷ್ಟೂ
ಪಕ್ವವಾಗದು ಮನ
ಹೊಗಳಿಕೆ-ತೆಗಳಿಕೆ
ಕಂಗೆಡಿಸಬಹುದು
ನಿನ್ನ ಮೂಲವ
ಬದಲಿಸದಿರು
ನಕಲಿಸದಿರು ll
