STORYMIRROR

Pushpa Prasad

Classics Inspirational Others

4  

Pushpa Prasad

Classics Inspirational Others

ನಿನ್ನ ಹುಡುಗಾಟ

ನಿನ್ನ ಹುಡುಗಾಟ

1 min
5

ನೀನೊಮ್ಮೆ ಅಚ್ಚರಿಯಿಂದ ನನ್ನನ್ನು

ನಿನ್ನ ಬೆರಗುಗಣ್ಣುಗಳಿಂದ ನೋಡಿದಾಗ

ಆ ಸೊಬಗನ್ನು ಕಣ್ತುಂಬಿಸಿಕೊಂಡು

ಹಾತೊರೆದೆನು ನನಗೆ ಗೊತ್ತಿಲ್ಲದೆ ನಾನು!!


ನಿನ್ನ ತುಂಟ ನಗು ಮಾಡಿತು ಮೋಡಿ

ಅದ ನೋಡಿ ನನ್ನ ಎದೆತುಂಬಿ ಬಂತು

ನನ್ನ ಪ್ರೀತಿಯ ಕಟ್ಟೆಯೊಡೆದು

ಒಲವಿನ ಒಸರು ತೊರೆಯಂತೆ ಹರಿದು ನಿನ್ನ ಸೇರಿತು!!


ನೀ ಅರಳು ಹುರಿದಂತೆ ಮಾತನಾಡುತ್ತಿರಲು

ಕ್ಷಣಕಾಲ ಮೂಕಳಾದೆ ನಾನು

ಓ ಮನ್ಮಥನೇ ನಿನ್ನ ಸಿಹಿ ದನಿಯ

ಬೈಗುಳವೂ ಮಾಡಿತು ನನ್ನ ಕಿವಿಗೆ ಇಂಪು !!


ನಿನ್ನ ಹುಸಿಮುನಿಸ ಸಹಿಸಕೊಂಡು

ನಿನ್ನ ನೆನೆದರೆ ಎದೆಯೆಲ್ಲಾ ದಿಗಿಲು

ಆ ದುಗುಡವನ್ನು, ಆ ಗಾಬರಿಯನ್ನು

ಹೇಳಲಾಗುತ್ತಿಲ್ಲ ನನ್ನಿಂದ ಓ ಗೆಳೆಯ!!


ನಿನ್ನ ಹುಡುಗಾಟ ನೋಡಿ

ನನ್ನ ಮನವಾಯಿತು ಗಾಳಿಪಟ

ಬೇಕೆಂದಿತು ಈ ಮನ ಪ್ರೀತಿ ತುಂಬಿದ

ಆ ನಿನ್ನ ಬೆಚ್ಚನೆಯ ಅಪ್ಪುಗೆ!!


ನನ್ನೊಡೆಯ, ನೀ ನಗುತಿರು ಸದಾ

ಪ್ರಪಂಚದ ಪರಿವಿಲ್ಲದೆ

ಎಂದೆಂದಿಗೂ ಖುಷಿಯಾಗಿರು

ನನ್ನೊಲವ ಮನದರಸ!!


Rate this content
Log in

Similar kannada poem from Classics