ನೀನಿಲ್ಲದೆ ಏನಿದೆ...?
ನೀನಿಲ್ಲದೆ ಏನಿದೆ...?
ನಿನ್ನ ಜೊತೆಗೆ ಸಾಗೋ ನೆರಳಂತೆ ನಾನು
ನೀನಿಲ್ಲದೆ ಏನಿದೆ...?
ನನ್ನ ಶ್ವಾಸಕೆ ಬಿಸಿಯುಸಿರಂತೆ ನೀನು
ನೀನಿಲ್ಲದೆ ಏನಿದೆ...?
ಆ ಶಶಿಯ ಬೆಳದಿಂಗಳೇ
ನನ್ನ ಹೃದಯಕೆ ಇಳಿದೆಯಾ...?
ಈ ದಾಸನ ಪ್ರೀತಿಗೆ
ತಡಮಾಡದೇ ಒಲಿದೆಯಾ...?
ಸ್ವಾತಿ ಮಳೆಗೆ ಬಾಯ್ತೆರೆದು ಕಾಯುವ
ಖಾಲಿ ಚಿಪ್ಪಂತೆ ನಾನು
ಸೋನೆ ಮಳೆಯ ಹನಿಯ ಹಾಗೇ
ಎದೆಗಿಳಿದು ಮುತ್ತಾದೆ ನೀನು
ಕಪಟತನದ ಲೋಕದಲ್ಲಿ
ಲೋಪವಿರದ ದೇವತೆ
ಅನುರಾಗಕೆ ಸೋತರೂ
ಸೋಲದಂತ ಅಪರಾಜಿತೆ
ನೀ ಪ್ರಾಣವು ದೇಹ ನಾನು
ನೀನಿಲ್ಲದೆ ಏನಿದೆ...?
ನನ್ನ ಬದುಕಿಗೆ ಆಧಾರವೇ ನೀನು
ನೀನಿಲ್ಲದೆ ಏನಿದೆ...?
✍️ಪರಿಚಯ

