STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ನೆರಳು - ಬೆಳಕು

ನೆರಳು - ಬೆಳಕು

1 min
186


ಹುಣ್ಣಿಮೆಯ ಬಾನ ಬೆಳದಿಂಗಳಲ್ಲಿ 

ಮನ ಬಿಚ್ಚಿ ಹೇಳಲು ಆಗದು 

ನೀರವ ವಾತಾವರಣದಲ್ಲಿ 

ವಟಗುಟ್ಟಿನ ಸದ್ದು,

ನನ್ನ ಎದೆಯ ತಂತಿಯ ಮೇಲೆ 

ಮೂಕ ರೋದನದ ಸಾಲು, 

ತಪ್ಪಿದ ತಾಳಕ್ಕೆ 

ಹೆಜ್ಜೆ ಗೆಜ್ಜೆಗಳ ನಾದ ಅವಶೇಷಗಳು,

ತೆರೆಯ ಮರೆಯಲ್ಲಿ ಬಿಕ್ಕುತ್ತವೆ 

ನಿಸ್ತೇಜ , ನಿರಾತಂಕ ವಾಂಛೆ 


ಗತಿಸಿಹೋದ ದಿನಗಳ 

ಏಣಿಸಿ ನೋಡಿದರೆ, 

ಹರಿದು ಕರಗಿಹೋದ ಬದುಕು 

ಯೌವನದ ಹಣತೆಯಲ್ಲಿ ಉರಿದು 

ಎಣ್ಣೆ ಮುಗಿಯುವ ಹೊತ್ತಿಗೆ, 

ಜೋತುಬಿದ್ದ ಕರಕಲಾದ ಬತ್ತಿ. 

ಬೆತ್ತಲೆಯಾಗಿ ಸಾವಿನ ಬೆನ್ನಟ್ಟಿ 

ಹೊರಟ ನೆರಳಿನ ಛಾಯೆ, 

ತೆರೆದ ಕಿವಿಯಲ್ಲಿ ಮುಲುಗುತ್ತದೆ

ಯಾತನೆಯ ಹಾಡುಗಳು. 

ಹುಣ್ಣಿಮೆಯ ಬಾನ ಬೆಳದಿಂಗಳಲ್ಲಿ 

ಭರವಸೆಯ ಬೆಳಕು - ನೆರಳಿನ ಚಿತ್ರಣ



Rate this content
Log in

Similar kannada poem from Classics