ನಾಶ
ನಾಶ
ಮಾನವನ ಸ್ವಾರ್ಥದಿಂದ ನಾಶವಾಗುತ್ತಿದೆ ಪ್ರಕೃತಿ
ಮೂಡಿಸಬೇಕು ಜನರಲ್ಲಿ ಪರಿಸರದ ಜಾಗೃತಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ವಿಕೃತಿ
ಅಳಿದು ಹೋಗದಿರಲಿ ನಮ್ಮ ಚೆಂದದ ಸಂಸ್ಕೃತಿ
ಕಾಡೆಲ್ಲ ನಾಶವಾಗಿ ನಶಿಸುತ್ತಿದೆ ಪ್ರಾಣಿಗಳ ವಂಶ
ತಪ್ಪಿಸಬೇಕು ಪ್ರಾಣಿಸಂಕುಲಗಳ ವಿನಾಶ
ಪರಿಸರದ ಅಸಮತೋಲನವು ತಂದಿಹುದೆಮಗೆ ವಿಪತ್ತು
ಅರಣ್ಯ ನಾಶದಿಂದಾಗಿ ಬರಿದಾಗುತ್ತಿದೆ ಜಗತ್ತು
ಯುದ್ಧ ಪ್ರಾರಂಭವಾದರೆ ದೇಶದ ನಾಶ ಖಚಿತ
ಸಂಶಯದ ಕಿಡಿ ಹೊತ್ತಿದ್ದರೆ ಸಂಸಾರದ ನಾಶ ನಿಶ್ಚಿತ
ಬದಲಾಯಿಸಲಾಗದು ವಿಧಿ ಲಿಖಿತ
ನೆನಪುಗಳು ಉಳಿಯುವುದು ಶಾಶ್ವತ
