STORYMIRROR

Ashwini Revathi

Classics Inspirational Others

4  

Ashwini Revathi

Classics Inspirational Others

ಕಟು ಸತ್ಯ

ಕಟು ಸತ್ಯ

1 min
261

ಜೀವನವೆಂಬ ರಂಗಮಂಚ...

ಹಣವೆಂಬ ದೈತ್ಯನ ಎದುರು ಸೋತು ಹೋಗಿದೆ ಪ್ರಪಂಚ...

ಸುಖ ನೆಮ್ಮದಿ ಗಿಂತ ಹಣವೇ ಮುಖ್ಯ...

ಬಡವನ ದುಡಿಮೆಗಿಲ್ಲ ಪ್ರಾಮುಖ್ಯ...


ದೊಡ್ಡವರು ಎಂದರು ಹಣ ನೋಡಿದರೆ ಹೆಣವೂ ಬಾಯಿ ಬಿಡ್ತದೆ...

ಹೌದೆಂದಿತು ಈಗಿನ ಜಗತ್ತು ಹಣ ನೋಡಿದರೆ ಹೆಣವೂ ಬಾಯಿ ಬಿಡ್ತದೆ...

ಮನಸ್ಸೆಂದಿತು ಯಾಕೆ ಈಗಿನ ಸಮಾಜಕ್ಕೆ ಇಷ್ಟೊಂದು ಹಣದ ಪ್ರೇಮ...

ಎಷ್ಟು ಭಾವನೆ ರಕ್ತ ಸಂಬಂಧಗಳು ಹಾಳಾಗುವ ಈ ಜನುಮ...


ಮರೆಯುತಿದೆ ಸಿರಿತನ ಭಾವನೆಗಳನ್ನು ನಾಶಮಾಡಿ...

 ಎಲೆ ಮನುಷ್ಯ ಎಚ್ಚರಗೊಳ್ಳು ಹಣವಲ್ಲ ಮಾನವೀಯತೆ ತೋರು...


ಬಾಲ್ಯದಿಂದಲೂ ನಾ ನೋಡಿರುವೆ ಮನುಷ್ಯನ ಕಣ್ಣಲ್ಲಿ ಶ್ರೀಮಂತಿಕೆಯ ಅಟ್ಟಹಾಸ...

ಯಾರು ನಮ್ಮವರು ಯಾರು ಪರರು ಬಡತನ ಕಲಿಸಿತ್ತು ಆ ಸುಂದರ ಪಾಠ...

ಅಮ್ಮನ ಕಣ್ಣಂಚಿನಲ್ಲಿದ್ದ ಕಣ್ಣೀರು ಕಲಿಸಿತ್ತು ಬದುಕಿನ ಪಾಠ...

ಕಷ್ಟದ ಪ್ರಳಯದ ಮಧ್ಯೆಯಲ್ಲಿ ನನ್ನೊಂದಿಗಿದ್ದು ಅವಳ ಮಂದಹಾಸ...


ಜೀವನ ಎಂಬ ಕಟು ಸತ್ಯದ ಬಗ್ಗೆ ಕಲಿತ ನಾನು...

ಎಂದಿಗೂ ಮರೆಯಲಾರೆ ಅಮ್ಮ ಕಲಿಸಿದ ಪ್ರಾಮಾಣಿಕತೆ ಎಂಬ ಬಾನು...

ಇಂದು ಎಲ್ಲಿ ನೋಡಿದರಲ್ಲಿ ಇರುವರು ಸಂಬಂಧಿಕರು...

ಯಾಕೆಂದರೆ ಈಗ ನಾವಾಗಿದ್ದೇವೆ ಅವರ ಪ್ರಕಾರ ಹಣವಂತರು...


ಎಲೆ ಮನುಷ್ಯ ಎಚ್ಚರಗೊಳ್ಳು ಹಣವಲ್ಲ ಮಾನವೀಯತೆ ತೋರು...


Rate this content
Log in

More kannada poem from Ashwini Revathi

Similar kannada poem from Classics