ಕನ್ನಡದ ನೆಲೆ ಅಕ್ಕರೆಯ ಸೆಲೆ
ಕನ್ನಡದ ನೆಲೆ ಅಕ್ಕರೆಯ ಸೆಲೆ
ಸಾಹಿತ್ಯ ಸಾಗರ ಸಂಪತ್ತಿನ ಶೃಂಗಾರ
ದಾಸರ ಪದಗಳ ಚಿತ್ತಾರ ಸಾಹಸಿರ ದೇವಾಲಯದ ಅಲಂಕಾರ
ಹರಿವಳು ಕಲ ಕಲದಿ ಜೀವ ನದಿ ಕಾವೇರಿ
ಮಗುವಂತೆ ನಮ್ಮೆಲ್ಲರನ್ನು ಸಲಹುವ ತಾಯಿ ಭುವನೇಶ್ವರಿ
ಕದಂಬರು ಚಾಲುಕ್ಯರು ಕಟ್ಟಿದ ಕನ್ನಡ ನಾಡು
ವಿಜಯನಗರ ಮೈಸೂರು ರಾಜರ ಕನಸಿನ ಗೂಡು
ಚೆನ್ನಮ್ಮ ಓಬವ್ವ ವೀರ ವನಿತೆಯ ಅವತಾರ
ಕವಿ ಪುರೋಹಿತರ ಪದಗಳಲ್ಲಿ ಕರುನಾಡು ಅಜರಾಮರ
ಬೆಲೆ ಕಟ್ಟಲಾಗದು ಈ ನೆಲೆ ಸೆಳೆಯ ಕಳೆಯ
ಕಲೆ ಸಂಗೀತದ ಸುಗಂಧ ಉಸಿರಾಡುತ ತನು ಚಿನ್ಮಯ
ಇಲ್ಲಿ ಹುಟ್ಟಿದ ಜನುಮ ಪಾವನ ಸಂಜೀವನ
ಜಂಗಮ ಸಂಗಮ ಭೂಮಿಯಲ್ಲಿ ಆಗಲಿ ಮುಂದಿನ ಜನನ
