Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

S Jagadeesha

Classics Inspirational

3  

S Jagadeesha

Classics Inspirational

ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

1 min
61



ಮನದಿ ಮೂಡಿದ ಚತುರೆ, ಕ್ಷಣದಿ ಕ್ಷಯಿಸುವ  

ಚಪಲೆ, ಚಿತ್ತ ಚಂಚಲೆ ಇವಳು,  ಕಾವ್ಯದೈಸಿರಿ ಕನ್ನಿಕೆ|

ಭಾವದಲಿ ಬರಹದಲಿ - ಬಂಧಿಸಿದ ಜಾಣ ಕವಿ -

ಮೂಡಿದಳು ಗ್ರಂಥದಲಿ - ಕಾವ್ಯದೈಸಿರಿ ಕನ್ನಿಕೆ|| 


ನವಭಾವ ನವರಸದಿ ನವ ಜನ್ಮ ತಳೆಯುವಳು 

ಕರಗಿ ಹೊರಳುವಳವಳು ಕಲ್ಪನೆಯ ಕುಲುಮೆಯಲಿ|

ಉಗಮ ಕವಿ ಮನದಲ್ಲಿ ಹರಿವು ಕವಿ ಹಾದಿಯಲಿ  

ರಸಿಕರಿಗೆ ರಸದೂಟ ಉಣಿಸಿ ಒಲುಮೆಯಲಿ|| 


ಎಷ್ಟು ಬಳಸಿದರೇನು ಎಷ್ಟು ಉಣಿಸಿದರೇನು 

ಅಕ್ಷಯವು ಕಾವ್ಯ ಸಿರಿ ನಿತ್ಯ ನವ ರೂಪ|

ಕಾವ್ಯದೊಡೆ ವೈಭವದಿ ಲಯ ರಾಗ ಶೃತಿ ಮಿಲನ 

ಗೀತ ಗಾನದ ಸುಧೆಗೆ ಸರಿದು ಪರಿತಾಪ ||


ಇಳಿ ಕನ್ಯೆ ಇಳೆಯೊಳಗೆ, ಇರು ನೀನು ಅರಿವೊಳಗೆ 

ಜ್ಞಾನ ಮೊಳಕೆಯು ಮನದಿ, ಚಿಗುರಿ ಆಗಲಿ ಹೆಮ್ಮರ|

ಆವರಿಸು ಅವತರಿಸು ಕಾವ್ಯದಲಿ ಕವನದಲಿ  

ಪಸರಿಸಲಿ ಜ್ಞಾನದೀವಿಗೆ ಬೆಳಕು ಗಗನದೆತ್ತರ||




Rate this content
Log in

Similar kannada poem from Classics