ಇಷ್ಟ ಪಡುವೆಯಾ?
ಇಷ್ಟ ಪಡುವೆಯಾ?
ನೀನು ನಾನು ಅಂತ ಏನಿದೆ
ಎರಡು ಮನಸ್ಸುಗಳು ಒಂದಾಗಿದೆ.
ಹಾಗಾಗಿ ಹೃದಯ ನಿನ್ನನ್ನು ಬಿಟ್ಟು ಮತ್ತೆ ಏನು ಬಯಸುವುದಿಲ್ಲ.
ನಿನ್ನ ಹೃದಯದಲ್ಲಿ ನನಗೆ ಅಂತ ಒಂದು ಪುಟ್ಟ ಜಾಗವನ್ನು ಕೊಡುವೆಯಾ??
ನಾನು ನಿನ್ನ ನಗು ಬಯಸಿದಾಗಲೇ
ನನ್ನ ಮನ ನಿನ್ನದಾಯ್ತು.
ನೀನು ಸಹ ತದನಂತರ ನನ್ನ ನಗು ಬಯಸಿದಾಗಲೇ,
ನಿನ್ನ ಮನ ನನ್ನದಾಯಿತು.
ನಾನು ನಿನ್ನ ಕಂಡ ಕ್ಷಣದಿಂದಲೇ,
ನನ್ನ ಮನ ನಿನ್ನದಾಯ್ತು.
ನಿನ್ನ ಮನ ನನದಾಗಿಸಿಕೊಳ್ಳಲು ಆಸೆಯನ್ನು ಪಡುತ್ತಿದೆ ನನ್ನ ಮನ,
ನನ್ನನ್ನು ಅರ್ಥೈಸಿಕೊಂಡು ಒಪ್ಪಿಕೊಳ್ಳುವೆಯ??
ನೀನೆಂದರೆ ಬಲು ಇಷ್ಟ ನನಗೆ
ಸಹಿಸಲಾರೆನು ನಿನಗೇನಾದರೂ.
ನಾನೆಂದು ನಿನಗಾಗಿ ಇರುವೆ.
ನನ್ನನ್ನು ನೀನು ಸಹ ,
ಇಷ್ಟಪಡುತ್ತಿದೀಯಾ ತಾನೇ??