STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

1 min
286


ಮೈಸೂರು ಸಂಸ್ಥಾನ ಮರುನಾಮಕರಣವಾಯಿತು

"ಕರ್ನಾಟಕ"ವೆಂದು ಸುಂದರ ಹೆಸರಾಗಿ

ಕನ್ನಡಿಗರ ಹೃದಯದಲ್ಲಿ ಆರಾಧನೆಯಾಗಿ

 ಕನ್ನಡ ನುಡಿಯು ಕನ್ನಡಿಗನ ಉಸಿರಾಗಿ


ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ

ಪ್ರತಿ ಕನ್ನಡಿಗರ ಬದುಕು ಈ ಮಣ್ಣಿನಲ್ಲಿ

ಶ್ರೀಗಂಧದ ಕಂಪು ಸೂಸುವ ಬೀಡು

ಅನ್ಯಭಾಷಿಗರ ಸ್ವಾಗತಿಸುವ ಕರುನಾಡು


ಬೇಸರಿಸಲಿಲ್ಲ ಯಾರೇ ವಲಸೆ ಬಂದರೂ

ಕನ್ನಡವನ್ನೇ ಬಳಸಲು ನಿಷೇಧ ಹೇರಿದರೂ

ತಾಳ್ಮೆಯ‌ ಪ್ರತೀಕವಾದ ಕರ್ನಾಟಕ ಮಾತೆಗೆ 

ನವೆಂಬರ್ ನಲ್ಲಿ ಮಾತ್ರ ಗೌರವ ಸಿಕ್ಕರೆ ಸಾಕೆ


ಕರುನಾಡು ಕಂಪು ಹರಡಿದೆ ಭಾರತದ ಉದ್ದಗಲಕ್ಕೆ

ಇಲ್ಲಿನ ಆಚರಣೆಗಳೆಂದರೆ ಪ್ರೀತಿ ವಲಸಿಗರಿಗೆ

ಕನ್ನಡ ಮಾತನಾಡಲು ಹಮ್ಮು ಬಿಮ್ಮು ಏತಕೆ

ನಾವು ಕನ್ನಡಿಗರೆನ್ನುವುದೇ ಹೆಮ್ಮೆಯಲ್ಲವೇ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics