STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ದೀಪದ ಬೆಳಕು

ದೀಪದ ಬೆಳಕು

1 min
179


ಮನೆಯ ತುಂಬೆಲ್ಲಾ ಹಚ್ಚಬೇಕಿಲ್ಲ ಹಣತೆ

ಮನದ ತುಂಬಾ ಬೆಳಗಬೇಕಿದೆ ಮಮತೆ

ಕಿಚ್ಚನು ಹಚ್ಚಿ ಉಳಿಯಬೇಕಿಲ್ಲ ಜಗದಲಿ

ಚುಚ್ಚುವ ಮಾತನು ಆಡದಿರಿಂದು ನಗುತಲಿ


ರಂಗು ರಂಗಿನ ಬಣ್ಣ ಬೇಕಿಲ್ಲ ಅಂಗಳದಲಿ

ರಂಗಾದ ಕನಸುಗಳು ತುಂಬುತಿರಿ ಪರರಲಿ

ಅಸೂಯೆಯ ಅಂಧಕಾರದಲಿ ಮುಳುಗದಿರಿ

ಹಿಂಸೆಯ ಮಾಡುತಲಿ ಜೀವನವ ಕಳೆಯದಿರಿ


ಅಳಿಸುವದಾದರೆ ಅಜ್ಞಾನದ ಕತ್ತಲೆ ಅಳಿಸಿಬಿಡಿ

ತುಳಿದು ಬದುಕುವ ಕನಸನಿಂದು ತೊರೆದುಬಿಡಿ

ಬೆಳಗುವ ದೀಪಕ್ಕಿಂದು ಒಲವ ತೈಲ ಬೆರೆಸಿಬಿಡಿ

ಹೊಳೆಯುವ ಕಂಗಳಲಿ ಭರವಸೆಯಾಗಿದ್ದುಬಿಡಿ


ಸಂಕಷ್ಟವೆಂಬ ಸಾಗರವ ದಾಟಿ ಸಾಗಬೇಕಿಂದು

ನಷ್ಟದ ದಿನಗಳನು ಮರೆತು ಬೆಳೆಯಬೇಕಿಂದು

ಶಪಿಸದಿರಿ ಬಾಳಲಿ ಪರರ ಏಳಿಗೆಯ ಕಂಡಿಂದು

ದೀಪದಂತೆ ಪ್ರಜ್ವಲಿಸಲಿ ನಮ್ಮಯ ಬದುಕಿಂದು


Rate this content
Log in

Similar kannada poem from Classics