STORYMIRROR

Pooja Shanmuk

Abstract Inspirational Others

4  

Pooja Shanmuk

Abstract Inspirational Others

ಅಯೋಮಯ

ಅಯೋಮಯ

1 min
287

 ಕಣ್ಣಿದ್ದೂ ಕುರುಡಾಗಿ ಜೀವನ ನಡೆದಿದೆ

ಬೆಳಕಿದ್ದು ಕತ್ತಲೆಯತ್ತಿರ ಪಯಣ ಸಾಗಿದೆ

ಸತ್ಯ ಅಗತ್ಯದ ಕಾಲಡಿ ಸಿಲುಕಿ ನರಳುತ್ತಿದೆ

ಸುಳ್ಳು ಅದಕ್ಕೆ ಮುನ್ನಡಿ ಬರೆಯುತ್ತಿದೆ

ಸುಂದರ ಕ್ಷಣಗಳು ಜಂಗಮವಾಣಿಯಲ್ಲಿ ಸೆರೆಯಾಗಿವೆ

ಅವಲಕ್ಷಣಗಳು ವಾಸ್ತವದಲ್ಲಿ ತಾಂಡವವಾಡುತ್ತಿವೆ

ಗುರೂಜಿಯ ಸಂಪರ್ಕ ಕ್ರಮೇಣವಾಗಿ ಕುಸಿಯುತ್ತಿದ್ದರೆ

ತ್ರೀಜಿ ಫೋರ್ಜೀಯ ಸಂಪರ್ಕ ಗಗನಕ್ಕೇರುತ್ತಿದೆ

ಪ್ರೀತಿ ಮಮತೆಯು ಬೆರೆತ ಅಡುಗೆಯ ಘಮ ಕಣ್ಮರೆಯಾಗುತ್ತಿದ್ದರೆ

ಆನ್ಲೈನ್ ಅಡುಗೆಯ ಘಮ ಮನೆ ಮನೆಗೆ ರವಾನೆಯಾಗುತ್ತಿದೆ

ತಾಯಿ ಮಡಿಲಲ್ಲಿ ಮಲಗಿದಾಗ ದೂರಾಗುತ್ತಿದ್ದ ಬೇಸರ

ವಾಟ್ಸ್ ಆ್ಯಪ್ ಸ್ಟೇಟಸ್ಸಿನಲ್ಲಿ ಸ್ಟೇಟಸ್ ಹಾಕಿದಾಗ ದೂರಾಗುತ್ತಿದೆ

ದೂರವಿದ್ದರು ದೃಢವಾಗಿದ್ದ ನಂಬಿಕೆ

ಅಂತರ್ಜಾಲದಲ್ಲಿ ಹತ್ತಿರವಿದ್ದು ದೂರಾಗುವಂತಾಗಿದೆ

ದೇಗುಲ ದರ್ಶನಕ್ಕೆ ಹೋದರು ಬಾರದ ಭಕ್ತಿ

ಜಾಲತಾಣಗಳಲ್ಲಿ ಹರಿದಾಡುತ್ತಿದೆ

ಎಲ್ಲಾ ಅಯೋಮಯವಾಗಿದೆ

ನಮಗರಿಯದೆ ಕಾಲ ಸಾಗುತಲಿದೆ !!



Rate this content
Log in

More kannada poem from Pooja Shanmuk

Similar kannada poem from Abstract