STORYMIRROR

Pooja Shanmuk

Classics Inspirational Others

4  

Pooja Shanmuk

Classics Inspirational Others

ಕಾರ್ಮಿಕ

ಕಾರ್ಮಿಕ

1 min
227

ಶ್ರಮಿಕ ನೀನು ಕಾರ್ಮಿಕ

ಬದುಕು ಬದಲಿಸುವುದೇ ನಿನ್ನ ಕಾಯಕ

ನೀನೊಬ್ಬ ಸ್ವಾಭಿಮಾನದ ಸೇವಕ

ನಿನಗೆ ಸರಿಸಾಟಿಯಾಗಲಾರ ನಿನ್ನ ಮಾಲಿಕ !!


ದೇಶದ ಪ್ರಗತಿಗೆ ನೀನೆ ಚಾಲಕ

ನಿನ್ನ ಬೆವರ ಹನಿಯ ಶ್ರಮದಿಂದಲೆ ಮೆರೆಯುತಿಹನು ಧನಿಕ

ಸಂಸಾರದ ಭಾರ ಹೊತ್ತು ನಡೆವ ನೀನೊಬ್ಬ ನಾವಿಕ

ಅದೆಷ್ಟೇ ಅಡತದೆಗಳಿದ್ದರು ಅದನ್ನು ಮೆಟ್ಟಿನಿಲ್ಲುವ ನೀನೇ ನಿಜವಾದ ನಾಯಕ !!


ನಿನ್ನ ಮಕ್ಕಳ ಮುದ್ದಿನ ಪೋಷಕ

ಅವರನ್ನು ಕಾಯುವ ನೀನೊಬ್ಬ ಸೈನಿಕ

ನಿನ್ನಂತರಾತ್ಮವೇ ಕರುಣಾಜನಕ

ನಿನ್ನ ನಿಲುವಂತೂ ಅತ್ಯಾಕರ್ಷಕ !!


ಕಷ್ಟ ಕಾರ್ಪಣ್ಯಗಳ ಸಹಿಸುವ ತಾಂತ್ರಿಕ

ಜೀವನದುದ್ದಕ್ಕೂ ಏರು ಪೇರುಗಳ ಮೇಲೆ ನಡೆದಾಡುವ ಪ್ರಯಾಣಿಕ

ಯಾರಲ್ಲೂ ಏನನ್ನು ಬೇಡದ ಸ್ವಯಂಸೇವಕ

ನಿನ್ನ ನೇನೆದಾಗೆಲ್ಲ ಮನಸ್ಸಾಗುವುದು ಭಾವೋದ್ರೇಕ !!



Rate this content
Log in

More kannada poem from Pooja Shanmuk

Similar kannada poem from Classics