ಅಪ್ಪಾ, ಐ ಹೇಟ್ ಯು !
ಅಪ್ಪಾ, ಐ ಹೇಟ್ ಯು !
ಶಿಸ್ತು ಹೇಳಿಕೊಟ್ಟವರು ನೀವು,
ನಿಮ್ಮನ್ನು ಬಿಟ್ಟಿರುವುದು ಹೇಗೆಂದು ಹೇಳಿಕೊಡಲಿಲ್ಲ!
ನಡೆಯಲು ಕಲಿಸಿದವರು ನೀವು, ನಿಮ್ಮಿಂದ ದೂರ
ನಡೆಯುವುದು ಹೇಗೆಂದು ಕಲಿಸಲಿಲ್ಲ!
ಸುಖವನ್ನೇ ನೀಡಿದವರು ನೀವು,
ಕಷ್ಟಗಳನ್ನೇಕೆ ನೋಡಲು ಬಿಡಲಿಲ್ಲ!
ಅದೇಕೆ ಇಷ್ಟೆಲ್ಲ ತ್ಯಾಗ, ಸಹನೆ ನಿಮಗೆ,
ಮತ್ಯಾರಲ್ಲೂ ನಾನಿದನ್ನು ಕಾಣಲಿಲ್ಲ!
ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.
