ಆಕಾಶ ಗಂಗೆ.
ಆಕಾಶ ಗಂಗೆ.
ತನ್ನ ಹಿರಿಯರ ಸದ್ಗತಿಗಾಗಿ,ಭಗೀರಥನ ಪ್ರಯತ್ನಕ್ಕೆ
ಧರೆಗಿಳಿದು ಬಂದೆ, ನೀ ದೇವ ಗಂಗೆ,
ಭೋರ್ಗರೆದು ಇಳಿಯುವ ನಿನ್ನ ಅಬ್ಬರಕ್ಕೆ,
ಲೋಕವೇ ಮುಳುಗುವ ಭೀತಿ ಕಾಡಿತ್ತು ಅಂದೇ.
ಮತ್ತೆ ತಪ್ಪಿಸ್ಸಿಗಿಳಿದು, ಶಿವನನ್ನು ಬೇಡಿಕೊಂಡು
ನಿನ್ನ ಬಂದಿಸಿದರು ಕಾಲ ಬೈರವನ ಜಟೆಯಲ್ಲಿ,
ಶಿವನ ಮುಡಿಯಲ್ಲಿ ಸಿಲುಕಿದ ನಿನ್ನನು ಬಿಡಿಸಲು
ಮತ್ತೆ ಪರಶಿವನ ಬೇಡಿಕೊಂಡನು ಭಗೀರಥ,
ಬಿಡಿಸಿದ ತುಸು ಬಂಧನ ಪರಮೇಶ್ವರ,
ಇಳಿದಿಳಿದು ಬಂದೆ, ನೆಡೆದೆ ಭಗೀರಥನ ಹಿಂದೆ.
ಆದರೂ ನಿನ್ನ ರಭಸಕ್ಕೆ ಮುಳುಗಿತು,
ಜಹ್ನು ಮುನಿಗಳ ಆಶ್ರಮ,
ಕೋಪದಿ ಮುನಿ ಆಪೋಷನ ಮಾಡಿದರು ನಿನ್ನ.
ಆದರೂ ಬಿಡಲಿಲ್ಲ ತನ್ನ ಪ್ರಯತ್ನವನ್ನು ಭಗೀರಥ,
ಒಲಿಸಿಕೊಂಡ ಋಷಿವರ್ಯರ ಗುರುಭಕ್ತಿಯಿಂದ
ಜಹ್ನು ಮುನಿಗಳ ಕಿವಿ ಇಂದ ಮತ್ತೆ ಧರೆಗಿಳಿದೆ
ನೀ ಜಾಹ್ನವಿಯಾದೇ,
ಮತ್ತೆ ನೀ ನೆಡೆದೆ ಭಗೀರಥನ ಹಿಂದೆ,
ಹರಿದು ಹೋದೆ ನೀ ಪಾತಾಳಕ್ಕೆ,
ತೊಳೆದೆ ನೀ ಸಗರನ ಮಕ್ಕಳ ಬೂದಿಯನ್ನೇ,
ನೀಡಿದೆ ಮೋಕ್ಷ, ಅಳಿಸಿದೆ ಅವರ ಪಾಪವನ್ನೇ.
ದೇವಗಂಗೆ ನೀನು ತೊಳೆಯುತಿಹೆ ಇನ್ನು
ಮನುಜ ಮಾಡಿದ ಪಾಪವನ್ನು.
ದೋಷ ಕಳೆದು ಮೋಕ್ಷ ನೀಡಿ
ಸ್ವರ್ಗ ದಯಪಾಲಿಸುವ ಪಾವನ ಗಂಗೆ ನೀನು.
