STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಕುಟುಂಬ

ಕುಟುಂಬ

1 min
366

ಕುಟುಂಬ ಜೀವನ ನಮ್ಮಯ ಪದ್ಧತಿ

ಸಮಾಜ ಸ್ವಾಸ್ಥ್ಯಕೆ ಭದ್ರಬುನಾದಿ॥

ಸಂಬಂಧಗಳ ಗೌರವ ಉಳಿಸಿ

ಕಿರಿಯರ ಬದುಕಿಗೆ ನೀತಿಯ ಕಲಿಸಿ 

ಜವಾಬ್ದಾರಿಗೆ ಹೆಗಲನು ನೀಡಿ

ಹಿರಿಯರು ಬದುಕನು ನಡೆಸಿದರು॥

ಒಗ್ಗಟ್ಟಿನ ದುಡಿಮೆಗೆ ಪ್ರತಿಫಲ ಪಡೆದು

ಕೂಡಿ ಬಾಳುವ ನೀತಿಯ ಪಾಲಿಸಿ

ಹಂಚಿ ಉಣುವ ಕ್ರಮವನು ತಿಳಿಸಿ

ಬದುಕಿನ ಸಿಹಿಯನ್ನು ತಿಳಿಸುವುದು॥

ಆಟಕೆ ಊಟಕೆ ನೋವಿಗೆ ನಲಿವಿಗೆ 

ಬೆಳೆಯುವ ಮಗುವಿನ ಭದ್ರತೆಗೆ

ಕುಟುಂಬ ಒಂದು ಚೌಕಟ್ಟು

ಬಗೆಹರಿಸುವುದು ಬಿಕ್ಕಟ್ಟು॥

ಅಜ್ಜಿಯ ಅಜ್ಜನ ಅಪ್ಪನ ಅಮ್ಮನ

ಮಕ್ಕಳ ಮೊಮ್ಮಕ್ಕಳ ಜೊತೆಗೆ

ಲಾಲಿಸಿ ಪಾಲಿಸಿ ಆಲಿಸಿ ಬಾಳುವ

ಕುಟುಂಬ ಪದ್ಧತಿ ಉಳಿಸೋಣ॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics