STORYMIRROR

Ashritha Kiran ✍️ ಆಕೆ

Romance Classics Others

4  

Ashritha Kiran ✍️ ಆಕೆ

Romance Classics Others

ನಿನ್ನೇ ಪ್ರೀತಿಸುವೆ -4

ನಿನ್ನೇ ಪ್ರೀತಿಸುವೆ -4

2 mins
247

ಮೃಣಾಲಿನಿ ಅಪ್ಪನನ್ನು ಕಳೆದುಕೊಂಡ ವಿಚಾರ ವೃದ್ಧ ದಂಪತಿಗಳಿಗೆ ಪ್ರಭಾಕರ್ ಮೂಲಕ ತಿಳಿಸಲಾಗಿತ್ತು. ಮೃಣಾಲಿನಿಯ ಮನೆಗೂ ವೃದ್ಧ ದಂಪತಿಗಳ ಮನೆಗೂ ಹೆಚ್ಚು ಅಂತರವಿಲ್ಲದ ಕಾರಣ ನಿತ್ಯವೂ ಬಂದು ಅವಳೊಂದಿಗಿದ್ದು ಕಾಲ ಕಳೆಯುತ್ತಿದ್ದರು.. ಅವಳ ನೋವಿಗೆ ಹೆಗಲಾಗಿದ್ದರು.. ಒಂದು ಕಿತ್ತುಕೊಂಡರೆ ಆ ದೇವರು ಇನ್ನೊಂದು ಕೊಡುತ್ತಾನೆ ಎಂಬ ಮಾತಿನಂತೆ ತಂದೆಯ ಪ್ರೀತಿಯನ್ನು ತಂದೆಯನ್ನು ಕಸಿದುಕೊಂಡರು ಮೃಣಾಲಿನಿ ಗೆ ಈ ವೃದ್ದ ದಂಪತಿಗಳ ಮೂಲಕ ಅಜ್ಜ ಅಜ್ಜಿಯ ಪ್ರೀತಿ ಅವಳ ನೋವನ್ನು ಮರೆಸಲು ಸಹಕಾರಿಯಾಗಿತ್ತು.. ಒಂಟಿಯಾಗಿದ್ದ ಮೃಣಾಲಿನಿಗೆ ಅಜ್ಜ ಅಜ್ಜಿಯ ಆಸರೆ ಸಿಕ್ಕಂತಾಗಿತ್ತು.. ಮೃಣಾಲಿನಿ ಅವರ ಮನೆಗೆ ಬಂದಿರಲು ಒಪ್ಪದ ಕಾರಣ ಅವರೇ ಮೃಣಾಲಿನಿ ಮನೆಗೆ ಶಿಫ್ಟ್ ಆದರೂ.. ಯಾವ ಜನುಮದ ಬಂಧವೋ ತಿಳಿಯದು.. ನಿತ್ಯವೋ ಅಜ್ಜ ಅಜ್ಜಿಯೊಡನೆ ಅದೇ ಸಮುದ್ರದ ದಡಕ್ಕೆ ಹೋಗುತ್ತಿದ್ದಳು ಒಂಟಿಯಾಗಿ ಕುಳಿತು ಮನದ ತುಮುಲಗಳನ್ನು ಹಂಚಿಕೊಳ್ಳುತ್ತಿದ್ದಳು...


ವೃದ್ಧ ರಿಬ್ಬರು ಅರ್ಧದಲ್ಲಿ ನಿಂತ ಓದನ್ನು ಮುಂದುವರಿಸುವಂತೆ ಹೇಳಿ ಬಲವಂತದಿಂದ ಒಪ್ಪಿಸಿದರು.. ಅಂತೂ ಡಬಲ್ ಡಿಗ್ರಿ ಮುಗಿಸಿ ಒಂದೊಳ್ಳೆ ಕೆಲಸವನ್ನು ಹಿಡಿದಳು.. ಬೆನ್ನೆಲುಬಾಗಿ ನಿಂತ ಅಪ್ಪನ ಸ್ನೇಹಿತರಾದ ಪ್ರಭಾಕರ್ ಹಾಗೂ ತಾನು ಕೆಲಸಕ್ಕೆ ಎಂದು ಆರಿಸಿಕೊಂಡ ವೃದ್ದ ದಂಪತಿಗಳ ಋಣವನ್ನು ಈ ಜನ್ಮದಲ್ಲಿ ತೀರಿಸಲಾಗದು ಎಂದು ನಕ್ಷತ್ರದೊಂದಿಗೆ ರಾತ್ರಿ ಕುಳಿತು ಮಾತನಾಡುವುದನ್ನು ಆಲಿಸಿಕೊಂಡ ದಂಪತಿಗಳು ಅವಳ ಬಳಿ ಬಂದು" ಇದ್ದ ಒಬ್ಬ ಮಗ ಫಾರಿನ್ ನಲ್ಲಿದ್ದಾನೆ.. ಎಷ್ಟು ಹಣ ಬೇಕಿದ್ದರೂ ಕೇಳಿ ಕೊಡುತ್ತೇನೆ ಆದರೆ ಅಲ್ಲಿಗೆ ಬರಲಾರೆ ಎನ್ನುವ ಅವನ್ನನ್ನು ಹೇಗೆ ತಾನೇ ಬದಲಾಯಿಸಲು ಸಾಧ್ಯ? ಒಂಟಿಯಾಗಿದ್ದ ನಮಗೆ ಆಸರೆಯಾದವಳು ನೀನು .ನಮ್ಮ ಒಂಟಿತನ ಹೋಗಲಾಡಿಸಿದವಳು ನೀನು, ನಿನ್ನ ಋಣ ನಮ್ಮ ಮೇಲಿದೆ.ಮಕ್ಕಳೇ ನೋಡಿಕೊಳ್ಳದ ಈ ಕಾಲದಲ್ಲಿ ನೀನು ಸಂಬಳಕ್ಕಾಗಿ ನಮ್ಮಲ್ಲಿ ಇರದೆ ನಮ್ಮನ್ನು ಮಕ್ಕಳಂತೆ ನೋಡಿಕೊಂಡಿರುವೆ.. ನೀನು ನಮಗೆ ರಕ್ತಸಂಬಂಧವಲ್ಲದಿರಬಹುದು ಆದರೆ ನಾವು ನಿನ್ನನ್ನು ನಮ್ಮ ಮೊಮ್ಮಗಳಂತೆ ಕಂಡಿದ್ದೇವೆ ನಮ್ಮ ಮಧ್ಯೆ ಋಣದ ಮಾತೇಕೆ"ಎಂದು ಹೇಳಿ ಅಳುತ್ತಿದ್ದ ಮೃಣಾಲಿನಿಯನ್ನು ಸಮಾಧಾನ ಮಾಡಿದರು..

     

 ಅದಾಗಲೇ ಸಂತೋಷ್ ಮಗಳನ್ನು ಅಗಲಿ ಒಂದು ವರುಷ ಕಳೆದಿತ್ತು.. ಮೃಣಾಲಿನಿ ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.. ಮೃಣಾಲಿನಿಗೊಂದು ಒಳ್ಳೆ ಹುಡುಗನನ್ನು ಆರಿಸಿ ಮದುವೆ ಮಾಡುವ ಆಲೋಚನೆಯಲ್ಲಿ ಪ್ರಭಾಕರ್ ಅಜ್ಜ ಅಜ್ಜಿಯೊಂದಿಗೆ ಮಾತನಾಡಿದ್ದರು.. ಮೊದಲಿಗೆ ಒಪ್ಪದ ಮೃಣಾಲಿನಿ ತನ್ನನ್ನು ಪ್ರೀತಿಸುವವರ ಮಾತಿಗೆ ಇಲ್ಲವೆನ್ನಲಾಗದೆ ಒಪ್ಪಿಗೆ ಸೂಚಿಸಿದಳು.. ಒಂದು ದಿನ ಮನೆಯ ಬಾಗಿಲಲ್ಲಿ ಒಂದಷ್ಟು ಪುಸ್ತಕದ ಗಿಫ್ಟ್ ಬಾಕ್ಸ್ ಜೊತೆಗೆ ಪತ್ರವೊಂದಿತ್ತು..

    

ಪ್ರೀತಿಯ ಸಖಿಯೇ

        ನನ್ನ ಪರಿಚಯ ನಿಮಗಿಲ್ಲ.. ಆದರೆ ನಾನು ನಿಮ್ಮನ್ನು ಆರು ವರ್ಷದಿಂದ ಬಲ್ಲೆ... ಪ್ರತಿದಿನ ಸಂಜೆ ನನ್ನ ಒಂಟಿತನವನ್ನು ಕಳೆಯಲು ಅನಾಥನೆಂಬ ಭಾವವನ್ನು ಮರೆಯಲು ಸಮುದ್ರದ ತೀರದಲ್ಲಿ ವಿಹರಿಸುತ್ತಿದ್ದೆ. ಆಕಸ್ಮಾತ್ ಆಗಿ ಒಂದು ದಿನ ನಿಮ್ಮನ್ನು ಕಂಡೆ .ಕಡಲನ್ನು ನೋಡುತ್ತಾ ಕಣ್ಣೀರು ಹಾಕುವ ನಿಮ್ಮ ನೋವನ್ನು ಅರಿಯಲಾಗಲಿಲ್ಲ. ಆದರೆ ನನ್ನಂತೆ ನೀವು ಒಂಟಿಯಾಗಿರಬಹುದು .ಸಾಂತ್ವಾನಕ್ಕೆಂದು ಅಲೆಗಳನ್ನು ನಂಬಿ ಬಂದಿರುವಿರಿ ಎಂದು ತಿಳಿಯಿತು.. ಅಂದಿನಿಂದ ದೂರದಿಂದಲೇ ನಿಮ್ಮನ್ನು ನೋಡುತ್ತಿದ್ದೆ ನನ್ನ ನೋವನ್ನು ಮರೆಯುತ್ತಿದ್ದೆ.. ಅನೇಕ ಬಾರಿ ನಿಮ್ಮನ್ನು ಮಾತನಾಡಿಸಬೇಕೆಂದು ಅಂದುಕೊಂಡಾಗಲಿಲ್ಲ ಯಾವುದಾದರೂ ಒಂದು ಅಡೆಚಣೆಯಿಂದ ಭೇಟಿಯಾಗಲಾಗುತ್ತಿರಲಿಲ್ಲ... ಒಂದಷ್ಟು ದಿನ ನನ್ನಂತೆ ನೀವು ಸಮುದ್ರದ ದಡದಲ್ಲಿ ಕುಳಿತು ಪುಸ್ತಕ ಓದುವುದನ್ನು ಗಮನಿಸಿದ್ದೆ ನಮ್ಮಿಬ್ಬರ ಅಭಿರುಚಿಗಳು ಒಂದೇ ಎಂದು ಅನಿಸಿತು... ಒಂಟಿಯಾಗಿರುವ ನಾವು ಸಮಾನ ಅಭಿರುಚಿಗಳನ್ನು ಹೊಂದಿದ್ದೇವೆ .ಬದುಕಿನಲ್ಲಿ ಜಂಟಿಯಾಗಬಾರದೇಕೆ ಅನಿಸುತ್ತಿದೆ.. ನಿಮ್ಮ ಮನೆಯವರ ಬಳಿಯಲ್ಲಿ ನಾನು ಮಾತನಾಡಿದ್ದೇನೆ.ಅವರ ಒಪ್ಪಿಗೆ ಸಿಕ್ಕಿದೆ ನಿಮ್ಮ ಒಪ್ಪಿಗೆ ನನಗೆ ಮುಖ್ಯ.ಅವರೆಲ್ಲರ ಬಲವಂತಕ್ಕೆ ನೀವು ನನ್ನನ್ನು ವರಿಸುವುದು ನನಗೆ ಇಷ್ಟವಿಲ್ಲ. ನನ್ನ ಮನದಾಳದ ಮಾತನ್ನು ಪತ್ರದಲ್ಲಿರಿಸಿದ್ದೇನೆ.ಮದುವೆಯಾಗುವ ಇಚ್ಛೆ ಇದ್ದರೆ ‌ನಾವಿಬ್ಬರೂ ಪ್ರೀತಿಸುವ ಸ್ಥಳವಾದ ಅದೇ ಸಮುದ್ರದ ದಂಡೆಯಲ್ಲಿ ಭೇಟಿಯಾಗೋಣ ಪರಸ್ಪರ ಮಾತನಾಡಿ ಪ್ರೀತಿ ಹಂಚಿಕೊಳ್ಳೋಣ..

ಇಂತಿ ನಿಮ್ಮ ಪ್ರೇಮಿ...


ಮುಂದುವರಿಯುವುದು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Romance