STORYMIRROR

Anu Sushanth

Comedy Tragedy Others

3  

Anu Sushanth

Comedy Tragedy Others

ಕಲ್ಪನೆಯ ಪೆಟ್ಟಿಗೆ

ಕಲ್ಪನೆಯ ಪೆಟ್ಟಿಗೆ

1 min
395

ತನ್ನ ಸ್ವಂತ ಮನೆಯಲ್ಲಿ ಮಕ್ಕಳಿಂದಲೇ ವಯಸ್ಸಾದ ಮುದುಕನು ಮನೆಯಿಂದ ಹೊರಗೆ ಹಾಕಲ್ಪಟ್ಟ , ಮುಂದೆ ಏನೂ ಎನ್ನುವ ಪ್ರಶ್ನೆ ಮೂಲಕ ಆತನಿಗೆ ಹೊಳೆದದ್ದು ತನ್ನ ಆ ಹಳೆಯದಾದ ಕಬ್ಬಿಣದ ಪೆಟ್ಟಿಗೆ. ಅದನ್ನು ತೋರಿಸಿ ನನ್ನನ್ನು ಯಾರು ಕೊನೆಯವರೆಗೂ ಕಾಳಜಿ ವಹಿಸುವ ಮೂಲಕ ನೋಡುತ್ತಾರೋ ಅವರಿಗೆ ಇದರಲ್ಲಿನ ವಜ್ರ ವೈಡೂರ್ಯ ಸಿಗುತ್ತದೆ ಎಂದು ಹೇಳಿ ಅದನ್ನು ಯಾರಿಗೂ ತೋರಿಸದೇ ಅಲುಗಾಡಿಸಿ ಮತ್ತೆ ಮತ್ತೆ ತನ್ನ ಹತ್ತಿರ ಇಟ್ಟುಕೊಂಡು ಇರುತ್ತಿದ್ದ. 

  ಆ ಪೆಟ್ಟಿಗೆ ತನ್ನದಾಗ ಬೇಕೆಂದು ಮೂರು ಜನ ಸೊಸೆ ಯಂದಿರು ಮಾವನ ಆರೈಕೆ ಮಾಡಿದ್ದೇ ಮಾಡಿದ್ದು . ಕೊನೆಗೆ ಒಂದು ದಿನ ಆ ಮುದುಕನು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅದನ್ನು ನೋಡಲು ತುಂಬಾ ಒತ್ತಾಯಿಸುವಾಗ ನಾನು ಕಣ್ಣು ಮುಚ್ಚಿದ ಮೇಲೆ  ನಿಮಗೆ ಸೇರುತ್ತದೆ ಬಿಡಿ ಎಂದು ಹೇಳಿ ಸಲುಪ ಹೊತ್ತಿಗೆ ಸತ್ತು ಹೋದದ್ದನ್ನು ನೋಡಿ ಮೂವರೂ ಕಿತ್ತಾಟ ಶುರು ಮಾಡಿದಾಗ,ಅವರಲ್ಲಿ ಒಬ್ಬಳು ಸಮಾನವಾಗಿ ಹಂಚಿಕೊಳ್ಳೋಣ ಎಂದು ನೋಡಿದಾಗ ಅದರಲ್ಲಿರುವ ಕಲ್ಲುಗಳನ್ನು ನೋಡಿ ಮೋಸ ಹೋದವೆಂದರು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Comedy