ಅಪ್ಪ ನ ಮಗಳು
ಅಪ್ಪ ನ ಮಗಳು
- ಅಪ್ಪನ ನೆನಪು
🙏ಅಪ್ಪ ಅಂದ್ರೆ ಆಕಾಶ.. ಅವರ ಬಗ್ಗೆ ಬರೆಯೋಕೆ ಪದಗಳೇ ಸಾಕಾಗಲ್ಲ.. ಅವರಿಲ್ಲದೇ ಮೂರೂವರೆ ವರ್ಷ ಆಗಿದೆ. ಅವರಿಲ್ಲದ ಜೀವನ ಎಷ್ಟು ಕಷ್ಟ ಅಂತಾ ಈಗ ಗೊತ್ತಾಗೋಕೆ ಶುರುವಾಗಿದೆ. ಅಪ್ಪನ ಬಗ್ಗೆ ಒಂದಿಷ್ಟು ಬರಿಬೇಕು ಅಂತಾ ಅನಿಸಿದಾಗ ಈ ಲೇಖನ ರೂಪುಗೊಳ್ತು..
- ಅಪ್ಪ.. ಅದೊಂದು ಪದ.. ಜೀವನದ ಅವಿಭಾಜ್ಯ ಅಂಗ.. ಆ ಪದಕ್ಕೆ ಎಷ್ಟು ಮಹತ್ವವಿದೆ ಅಂದರೆ, ಕಳೆದ ಒಂದೂವರೆ ವರ್ಷದಿಂದ ಅಪ್ಪ ಅನ್ನೋ ಪದ ಕರೆಯೋಕ್ ಆಗದೇ ಒದ್ದಾಡ್ತಿದ್ದೀನಿ. ಅಪ್ಪ ಅಂತಾ ಕರಿಬೇಕು, ಅವರ ಜೊತೆ ಮಾತನಾಡಬೇಕು ಅಂತಾ ಪ್ರತಿ ದಿನ, ಪ್ರತಿ ಕ್ಷಣ ಅನಿಸುತ್ತೆ. ಆದರೆ ಅದು ಸಾಧ್ಯವಾಗ್ತಿಲ್ಲ.ಆದರೆ, ಕಳೆದ ವರ್ಷದಿಂದ ಫಾದರ್ಸ್ ಡೇಗೆ ಅಪ್ಪನ ಬಗ್ಗೆ ಬರೆಯೋಕೆ ಶುರು ಮಾಡಿದೀನಿ. ಎಲ್ಲರೂ ಹೇಳುವ ರೀತಿ ಅಪ್ಪ ಅಂದ್ರೆ ಆಕಾಶ ಮತ್ತು ಅದಕ್ಕಿಂತಲೂ ಮೇಲು. ಅವರ ಬಗ್ಗೆ ಬರೆಯೋಕೆ ಪದಗಳು ತಲೇಲಿ ಬರಲ್ಲ. ಏಕಂದ್ರೆ ಅಷ್ಟು ನಿಸ್ವಾರ್ಥ ಪ್ರೀತಿ ಅವರದ್ದು. ಅಮ್ಮನ ಪ್ರೀತಿ, ಮಮತೆ ಗುರುತಿಸೋ ಜಗತ್ತು, ಅಪ್ಪನ ಕಾಳಜಿ, ಜವಾಬ್ದಾರಿಯನ್ನು ಸ್ವಲ್ಪ ಕಡೆಗಣಿಸಿದ್ದೇ ಹೆಚ್ಚು.ನಾವು ಈಗ ತಿನ್ನೋ ಪ್ರತಿ ಅನ್ನದ ಅಗುಳಿನ ಮೇಲೂ ಅವರ ಬೆವರಿನ ಹನಿ ಇದೆ. ಸಾಯೋವರೆಗೂ ಇರುತ್ತೆ.
- ಅಪ್ಪ ಎಷ್ಟು ಕಷ್ಟ ಪಡ್ತಿದ್ರು ಅಂತಾ ಅವರ ದೂರ ಹೋದ ಮೇಲೆ ಗೊತ್ತಾಗ್ತಿದೆ. ಒಂದು ಕುಟುಂಬ ನಿಬಾಯಿಸೋಕೆ ಏನೆಲ್ಲಾ ಸರ್ಕಸ್ ಮಾಡ್ಬೇಕು. ಅಪ್ಪ ಏನು ಮಾಡ್ತಿದ್ರು ಅಂತಾ ಈಗ ಸ್ಪಷ್ಟವಾಗಿ ಗೊತ್ತಾಗಿದೆ. ಅವರಿರೋವರೆಗೂ ಏನೇ ಕಷ್ಟ ಇದ್ರೂ ಎಲ್ಲ ಆರಾಮಾಗಿ ನಡ್ಕೊಂಡು ಹೋಗ್ತಿತ್ತು. ಈಗ ಆಗ್ತಿಲ್ಲ. ನಮ್ಮನೇಲಿ ಏನೇ ಆಗ್ಬೇಕೆಂದರೂ ಬೇರೆಯವರ ಮನೆ ಮುಂದೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.....💞🙏Miss you ಅಪ್ಪಾಜಿ 🙏💞
