ಅಮ್ಮ
ಅಮ್ಮ
ಅಮ್ಮ
ನವಮಾಸ ಗರ್ಭದಲಿ ನನ್ನಿರಿಸಿ
ಜೀವ ನೀಡಿದಳು ನನ್ನಮ್ಮ
ನನಗಾಗಿ ತನ್ನ ಖುಷಿಗಳನ್ನೆಲ್ಲಾ
ತ್ಯಾಗ ಮಾಡಿದಳು ನನ್ನಮ್ಮ
ಆಕಾರವಿಲ್ಲದ ಈ ಬೊಂಬೆಗೆ
ರೂಪ ಕೊಟ್ಟ ಶಿಲ್ಪಿ ಅವಳು
ನನ್ನ ಈ ಜೀವಕೆ ಉಸಿರು ಕೊಟ್ಟ
ಕರುಣಾಮಯಿ ಇವಳು
ಕರುಣೆಯ ಸಾಕಾರ ಮೂರ್ತಿ
ಬದುಕುವಳು ನನಗಾಗಿ ಪ್ರತಿಕ್ಷಣ
ಸಾಗರದಷ್ಟು ಒಲವನ್ನು ಉಣಿಸಿ
ಸಲಹುವಳು ನನ್ನನ್ನು ಪ್ರತಿದಿನ
ನಾನೇನನು ಕೊಡಲಿ ಕಾಣಿಕೆ
ಜೀವ ಕೊಟ್ಟ ಪ್ರೇಮ ದೇವತೆಗೆ
ಅರ್ಪಿಸುವೆ ಈ ನನ್ನ ಜೀವನ
ಬದುಕು ರೂಪಿಸಿದ ಮಾತೆಗೆ
