STORYMIRROR

Gireesh pm Giree

Classics Inspirational

2  

Gireesh pm Giree

Classics Inspirational

ತೈಯಂ

ತೈಯಂ

1 min
92

ಕಣ್ಣಿಗೆ ಇಂಪು ತಂಪು ತಂಪು ತೈಯ೦ಗಳ ನೃತ್ಯ ವೈಭವ

ತನುಮನದಲ್ಲಿ ಭಕ್ತಿಯ ಮಹಾಪೂರದ ಸಂಭ್ರಮ ಸಂಗಮ

ಧರೆಯು ಆಗಸವು ಒಂದಾದ ಅನುಭವ

ಶರಣು ಶರಣು ನಾ ನಿನ್ನ ಚರಣ ಕಮಲಗಳಿಗೆ ದೇವ


ನಿನ್ನ ಕಣ್ತುಂಬಿಕೊಳ್ಳುವ ಭಕ್ತಿಯ ಸಾಗರವು ಹೃದಯದೊಳಗೆ ತುಂಬಲು

ಸಕಲ ಭಕ್ತರು ನಿನ್ನ ಅಪಾರ ಮಹಿಮೆಯ ಹೊಗಳಲು

ನಿನ್ನ ಮಹಿಮೆಯೇ ಅಪಾರ

ಇದು ನಿನಗಿದು ಮನದಾಳದ ನಮಸ್ಕಾರ


ಹಾಡಲು ಹೊಗಳಲು ಪದಗಳೇ ಸಾಲದು

ನೀ ಭಕ್ತರ ಸಲಹೊ ರೀತಿಯು ಊಹೆಗೂ ನಿಲುಕದು

ತೆಂಗಿನಗರಿಯ ಅಲಂಕಾರ ಮೊಗದಲ್ಲಿ ಬಣ್ಣದ ಚಿತ್ತಾರ

ಕಾಲಿಗೆ ಕಟ್ಟಿದ ಗೆಜ್ಜೆಯ ಜೇಂಕಾರ ನಿನ್ನ ನೋಡುವ ಗಳಿಕೆಯೇ ಸುಮಧುರ


ಚೆಂಡೆ ತಾಳಕ್ಕೆ ನಾಟ್ಯವಾಡುತ ನಮ್ಮ ನಾಟ್ಯ ಪ್ರಪಂಚಕ್ಕೆ ಕೊಂಡೊಯ್ಯುವೆ

ಆವೇಶದ ನಿನ್ನ ಮೊಗವ  ನೋಡುವ ನಾವುಗಳಿಗೆ ಭಯಗೊಳಿಸುವೆ

ಸೌಮ್ಯ ಸ್ವಭಾವದ ಮಾತಿನ ಮೋಡಿಗಾರ

ಈ ಸಮಸ್ತ ಊರಿಗೆ ನೀನು ತಾನೆ ಆಧಾರ


Rate this content
Log in

Similar kannada poem from Classics