STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ಸಂಸ್ಕೃತಿ

ಸಂಸ್ಕೃತಿ

1 min
329

ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುವ ಭರದಲ್ಲಿ

ಭಾರತೀಯ ಸಂಸ್ಕೃತಿಯನು ತೊರೆಯದಿರಿ ಇಲ್ಲಿ

ಸಂಸ್ಕೃತಿಯ ತಾಯಿ ಬೇರು ನಮ್ಮಯ ದೇಶವು

ಸುಸಂಸ್ಕೃತಿಯನು ಬೆಳೆಸುವಲಿ ಮೇಲು ನಾವು


ಪ್ರತಿಯೊಂದು ಆಚರಣೆಗೆ ಅದರದೇ ಮಹತ್ವ

ಆಚರಿಸಿದಾಗಲೇ ತಿಳಿಯುವುದು ಖಚಿತ ತತ್ವ

ರೀತಿ ನೀತಿಗಳಿಗೆ ಅದರದೇ ಚೌಕಟ್ಟಿನ ಮಂತ್ರ

ತಿಳಿದು ಅಸಡ್ಡೆ ಮಾಡಿದರೆ ಜೀವನವೇ ಅತಂತ್ರ


ನಮ್ಮ ದೇಶದ ಹಿರಿಮೆ ನಮಗಿರಲಿ ಎಂದೂ

ತಾಯಿ ನಾಡಿನ ಒಲುಮೆ ಬೆಳೆಯಲಿ ಎಂದೆಂದೂ

ಮಾರು ಹೋಗದಿರಿ ವಿದೇಶಿಯರ ನೋಟಕಿನ್ನು

ಅರಿತು ಬೆಳೆಸುತಿರಿ ನಮ್ಮ ಭವ್ಯ ಸಂಸ್ಕೃತಿಯನ್ನು


Rate this content
Log in

Similar kannada poem from Classics