STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಶಿರ್ಷೀಕೆ:- ಉತ್ತರಕರ್ನಾಟದ ಹೋಳಿ

ಶಿರ್ಷೀಕೆ:- ಉತ್ತರಕರ್ನಾಟದ ಹೋಳಿ

1 min
126

ಪ್ರತಿ ಗಲ್ಲಿಯ ಮನೆಮನೆಯ ಕಟ್ಟಿಗೆ

ಕುಳ್ಳು ಕದ್ದು ಕಲೆ ಹಾಕುವ ಒಟ್ಟಿಗೆ

ಲಬೊ ಲಬೋ ಬಾಯಿ ಬಡೆಯುತ

ಹಲಿಗೆ ಬಾರಿಸುತ‌ ಕಾಮನ ಸುಡುತ 


ಮರುದಿನ ಆಚರಿಸುವ ಹಬ್ಬ ಹೋಳಿ

ಸಪ್ತ ರಂಗುಗಗಳ ಬಣ್ಣ ಈ ಹೋಳಿ

ಭಾವೈಕ್ಯತೆಯ ಸಾರುವ ಈ ಹೋಳಿ

ಭೇಧಭಾವ ತೋರದೇ ಆಡುವ ಹೋಳಿ


ಹೋಳಿ ಹೆಸರಲಿ ಆಡುವ ಅಧರ್ಮ ಬೇಡ

ಸೃಷ್ಟಿಯಲ್ಲಿರುವುದು ವಿವಿಧ ಬಣ್ಣಗಳು

ತಿಳಿಯಿರಿ ನಾಟಕ ಸೋಗಿನ ಬಣ್ಣವ ಬೇಡ

ಬಣ್ಣಗಳಿರುವುದೇ ಜೀವನ ಆಧಾರ


ಭಾರತದ ಪ್ರತಿ ಹಬ್ಬಕೂ ಹಿನ್ನಲೆ ಉಂಟು

ತಿಳಿದು ಆಚರಿಸಿದರೆ ಅದಕ್ಕೆ ಬೆಲೆವುಂಟು

ಬಣ್ಣದಲಿ ಜೀವನದ ಸಾರವುಂಟು

ಸಮಭಾವದಿ ನೋಡಿ ಉತ್ಸಾಹ ಉಂಟು


ಹೋಳಿ ಹೋಳಿ ಬಣ್ಣದ ಹೋಳಿ

ರಂಗುರಂಗಿನ ಆಟವ ಆಡೋಣ ಓಕುಳಿ

ಹೋಳಿಹುಣ್ಣಿಮೆ ಸವಿಯುತ ಹೋಳಿಗೆ

ಚಂದ ಸಂಭ್ರಮ ಶುಭ ಹಾರೈಸುತ ಬಾಳಿಗೆ


Rate this content
Log in

Similar kannada poem from Classics