STORYMIRROR

Raghavendra S S

Classics Inspirational Others

4  

Raghavendra S S

Classics Inspirational Others

ಶಿಖರದ ಮೌನದಲಿ

ಶಿಖರದ ಮೌನದಲಿ

1 min
419

ಹಿಮಾಲಯ ಶಿಖರವು ಹಾಲ್ದೆನೆಯಂತೆ ನಿಂತಿದೆ ಮೌನದಲಿ

ಯಾರಿಗೂ ತಿಳಿಯದು ಅದರ ಅಂತರ್ಯದ ಚಿಲುಮೆ

ಶಿಖರವು ಪ್ರಕೃತಿ ನಿರ್ಮಿತವು ತ್ಯಾಗದ ನೆಲೆಯಾಗಿ

ಮೌನ ವ್ರತಾಚರಣೆಯ ಯೋಗಿಗಳಿಗೆ ಕರುಣೆಯ ಬೀಡಾಗಿದೆ

ಶಿಖರದಲಿ ಅಡಗಿರುವುದು ಸುಪ್ತಾವಸ್ಥೆಯ ಸುಪ್ತಚೇತನ

ನಭವನ್ನು ಚಿಂಬಿಸುವ ಹಾಗೆ ಕಾಣುವುದು ಶಿಖರದ ಹಾದಿ

ಕೋಲ್ಮಿಂಚಿನಂತೆ ಬುವಿಯಲ್ಲಿ ನಡೆಯುವುದು ಅದರ ಚಲನೆ

ಸಾಲುಸಾಲಾಗಿ ಹರಿಯುವುದು ಗಂಗಾಮೃತದ ಚೇತನ

ರಸ – ಋಷಿಗಳಿಗೆ ವೇದ್ಯವಾಗುವುದು ಶಿಖರಾಮೃತದ ಪಾವನ

ದೇಶವಿದೇಶ ಗಡಿಗಳ ರಹದಾರಿಗಳಿಗೆ ರಕ್ಷಾಕವಚ

ಮಾನವ ಜೀವನಕ್ಕೆ ಬುವಿಯಿಂದ ದಿಗಂತದಯೆಡೆಗೆ ಬದುಕಿನ ಕವಚ

ಮೌನಕ್ಕೆ ಶರಣಾದ ಯೋಗಿ , ಭಾವಕ್ಕೆ ಶರಣಾದ ತ್ಯಾಗಿ

, ಪ್ರಕೃತಿಗೆ ಶರಣಾದ ಮನುಷ್ಯ , ಜೀವನದ ಅಂತ್ಯದಲ್ಲಿ ಮೌನಕ್ಕೆ ಶರಣಾಗಲೇ ಬೇಕು ನರಮಾನವ,

ಶಿಖರದ ಮೌನಕ್ಕೆ ಬೆಲೆಯನ್ನು ನಿರ್ಧರಿಸಲಾಗದು.

ಶಿಖರವು ಮೌನದಲಿ ಸೂಚಿಸುವುದು ಭಾವಾತರಂಗ

ಇದಕ್ಕೆ ಸರಿಸಾಟಿ ನಿಲ್ಲಲಾರನು ಮಾನವನ ಅಂತರಂಗ

ಒಟ್ಟಿನಲಿ ಮಾನವನ ಹೃದಯವು ಸ್ಪಂದಿಸಬೇಕು ಮೌನದ ಸಂಕೇತದಲಿ

ಶರಣಾಗಿ …. ಶರಣಾಗಬೇಕು ……. ಪ್ರಕೃತಿಯ ಆರಾಧನೆಯಲಿ

           


Rate this content
Log in

Similar kannada poem from Classics